ಮೈಸೂರು: ಎಚ್.ವಿ.ರಾಜೀವ್ ಹುಟ್ಟು ಹಬ್ಬವನ್ನು ವಿಶೇಷ ಶಾಲೆಯ ಮಕ್ಕಳ ಜೊತೆ ಆಚರಿಸಲಾಯಿತು.

ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ
ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಶ್ರೀ ಪುಟ್ಟವೀರಮ್ಮ ವಿಶೇಷ ಮಕ್ಕಳ ಶಾಲೆಯ 80 ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್,ಸಮವಸ್ತ್ರ ನೀಡುವುದರ ಜೊತೆಗೆ ಮಧ್ಯಾಹ್ನದ ಊಟ ಬಡಿಸಿದರು.
ಎಚ್.ವಿ.ರಾಜೀವ್ ಸ್ನೇಹ ಬಳಗದ ಮಲ್ಲಿಕ್ ಹಾಗೂ ನಾಗೇಂದ್ರ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋರೋನ ಇದ್ದ ಕಾರಣ ಎಚ್.ವಿ.ರಾಜೀವ್ ರವರು ತಮ್ಮ ಹುಟ್ಟಿ ಹಬ್ಬ ಆಚರಿಸಿಕೊಂಡಿರಲಿಲ್ಲ.ಈ ಬಾರೀ ಶ್ರೀ ಪುಟ್ಟವೀರಮ್ಮ ವಿಶೇಷ ಮಕ್ಕಳ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಲೇಖನ ವಿತರಿಸಿದ್ದೇವೆ.ರಾಜೀವ್ ರವರು ವಿಭಿನ್ನವಾಗಿ ವಿಶೇಷವಾಗಿ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದಿದ್ದಾರೆ.ಈ ಹಿಂದೆ ಮುಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮುಂದಿನ ದಿನಗಳಲ್ಲಿ ರಾಜೀವ್ ರವರು ಎಂ ಎಲ್ ಎ ಆಗಲಿ ಎಂದು
ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಎಚ್.ವಿ.ರಾಜೀವ್ ಸ್ನೇಹ ಬಳಗದ
ಮಲ್ಲಿಕಾರ್ಜುನ್, ಮೋಹನ್ ಗೌಡ,ರಾಕೇಶ್ ಗೌಡ,ರಮೇಶ್,ಚಂದ್ರಶೇಖರ್, ರವಿ,ಕೌಶಿಕ್ ,ಗುರು,ಭರತ್,ಹರೀಶ್,ವಿವೇಕ್,ಕಿರಣ್ ಭಾಗಿಯಾಗಿದ್ದರು.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

