ಶ್ರೀನಗರ: ಜಮ್ಮು-ಕಾಶ್ಮೀರದ ಗಡಿಗಳಲ್ಲಿ ನಿಯಂತ್ರಣ ರೇಖೆ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉಡಿ ಸೆಕ್ಟರ್ ನ ಕಮಲ್ ಕೋಟೆ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅನುಮಾನಾಸ್ಪದ ಜನವಲನಗಳನ್ನು ಸೇನೆ ಪಡೆ ಗಮನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಧರು ಒಳ ನುಗ್ಗಲು ಪ್ರಯತ್ನಿಸಿದವರಿಗೆ ಸವಾಲು ಹಾಕಿ ಗುಂಡಿನ ಚಕಮಕ್ಕೆ ನಡೆಸಿದರು ಮಂಜು ಮುಸುಕಿದ ವಾತಾವರಣ ಸೇರಿದಂತೆ ಪ್ರತಿಕೂಲ ಹವಾಮಾನದಿಂದಾಗಿ ಒಳನೋಗಲು ಪ್ರಯತ್ನಿಸಿದವರ ಸ್ಥಿತಿ ಏನಾಗಿದೆ ಎಂದು ತಕ್ಷಣವೇ ತಿಳಿದಿಲ್ಲ, ಅಧಿಕಾರಿಗಳು ಶೋಧ ಕಾರ್ಯಗಳು ನಡೆಸುತ್ತಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

ವರದಿ: ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



