ಶರಣ ಬಸವೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಮುಂಗೈ ಆಟ

ಕೊಪ್ಪಳ:ಶರಣ ಬಸವೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಮುಂಗೈ ಆಟ.

ಶ್ರಾವಣಮಾಸದ ಕೊನೇಯ ಸೋಮವಾರ
ಗ್ರಾಮೀಣ ಯುವಕರ ಜಿದ್ದಿನಾಟ ಜೋರು
ಶ್ರಾವಣ ಅನ್ನೋ ಮಾತಿದೆ. ಅದರೊಂದಿಗೆ ಈ ಗ್ರಾಮೀಣ ಸೊಗಡಿನ ಜಿದ್ದಿನ ಆಟಗಳ ಜೋರು ಹೆಚ್ಚಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಗ್ರಾಮದ ಶರಣ ಬಸವೇಶ್ವರ ಜಾತ್ರೆ ಜರುಗಿತು ಶರಣ ಬಸವೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಭಜನೆ ಕಾರ್ಯಕ್ರಮ ಜರುಗಿದವು ಈ ಜಾತ್ರೆಯ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮೀಣ ಕ್ರೀಡೆಯಾದ ಮುಂಗೈ ಆಟ ಬಲು ಜೋರು ಸಾಲಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಯುವಕರು ಒಂದೆಡೆ ಸೇರಿಕೊಂಡು ಹಲವು ಮಜಭರಿತ ಗ್ರಾಮೀಣ ಕ್ರೀಡೆಯ ಕಡೆಗೆ ಮಾರು ಹೋಗಿದ್ದಾರೆ.

ಎಲ್ಲೆಂದರಲ್ಲಿ ಗುಂಪು ಕಟ್ಟಿ ಆಡುವ ಆಟಗಳಲ್ಲಿ ತೊಡಗಿರುವ ಯುವಕರ ಗುಂಪು ಕಂಡುಬರುತ್ತಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಯುವಕರು, ಮಕ್ಕಳು ಸೇರಿಕೊಂಡು ಗುಂಪು -ಗುಂಪಾಗಿ ಜಿದ್ದಿನ ಕ್ರೀಡೆಯಲ್ಲಿ ತೊಡಗಿರುವುದು ವಿಶೇಷವಾಗಿದೆ.

ಶ್ರಾವಣ ಮಾಸದ ದಿನಗಳಲ್ಲಿ ಹೊಲ-ಮನೆಯ ಕೆಲಸ ಕಡಿಮೆ ಹೀಗಾಗಿ ಹಳ್ಳಿಯ ಯುವಕರು.ದಿನ ಬೆಳಗಾದರೆ ಸಾಕು, ಅಗಸಿ, ಬೀದಿ, ಕಟ್ಟೆ, ರಸ್ತೆಯ ಮೇಲೆ ಗುಂಪು ಗುಂಪಾಗಿ ಯುವಕರಿಗೆ ಜಿದ್ದಿನಾಟಗಳಲ್ಲಿ ತೊಡುತ್ತಿದ್ದಾರೆ. ಅಪ್ಪಟ ದೇಶಿ ಕ್ರೀಡೆಗಳು ಯುವ ಸಮೂಹಕ್ಕೆ ಮುದ ನೀಡುತ್ತಿವೆ.
ಮುಂಗೈ ಆಟದಲ್ಲಿ ಮೇಲುಗೈ ಸಾದಿಸಿದ ಜನರಿಗೆ ಬೆಳ್ಳಿಯ ಕಡಗ ನೀಡಿಗೌರವಿಸುವದು
ಸಾಂಪ್ರದಾಯಿಕವಾಗಿ ಸಾಗಿ ಬಂದಿದೆ, ಕ್ರೀಡೆಯಲ್ಲಿ ಬಂದಂತ ಜನರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಯಿತು.

ವರದಿ:ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *