ಬಿಜೆಪಿ ಓಬಿಸಿ ಮೋರ್ಚಾ, ಸಾಗರ ತಾಲ್ಲೂಕು
ಮಾನ್ಯ ರಾಜ್ಯಪಾಲರು, ಕರ್ನಾಟಕ ಸರ್ಕಾರ, ಬೆಂಗಳೂರು.
ಮಾನ್ಯರೇ,
ವಿಷಯ : ಮಾನ್ಯ ಶ್ರೀ ರಾಹುಲ್ ಗಾಂಧಿಯವರು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಓಬಿಸಿಗೆ ಸೇರಿರುವವರಲ್ಲ ಎಂದು ಹೇಳಿಕೆ ಕೊಟ್ಟಿರುವ ವಿರುದ್ಧ.
ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ. ಈ ದೇಶವನ್ನು ಬಹಳಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸರ್ಕಾರ ವಿಶೇಷವಾಗಿ ಬಹುಸಂಖ್ಯಾತರನ್ನು ಹೊಂದಿರತಕ್ಕಂತಹ ಹಿಂದುಳಿದ ವರ್ಗದ ಸಮುದಾಯದ ನಿರ್ಲಕ್ಷ್ಯ ಹಾಗೂ ಚುನಾವಣೆಯ ಒಂದು ಗಿಮಿಕ್ ಭಾಗವಾಗಿ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ರಾಹುಲ್ ಗಾಂಧಿ, ನಮ್ಮ ಮಾನ್ಯ ಗೌರವಾನ್ವಿತ ಪ್ರಧಾನಿಗಳ ಕುರಿತಾಗಿ ಅವರ ಜಾತಿಯನ್ನು ಪ್ರಶ್ನೆ ಮಾಡಿದರು. ಆದರೆ ಆ ತೈಲಿ (ಗಾಣಿಗ) ಸಮುದಾಯ ಏನಿದೆ ಅದು ಈಗಾಗಲೇ ದಶಕಗಳ ಹಿಂದಿನಿಂದಲೂ ಸಹ ಅದು ಓಬಿಸಿ ಸಮುದಾಯಕ್ಕೆ ಸೇರಿದಂತಹ ಒಂದು ಜಾತಿ. ಆದರೆ, ಈ ರೀತಿ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಂತ ರಾಹುಲ್ ಗಾಂಧಿ ವಿರುದ್ಧ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ನೋಟಿಸ್ ಅನ್ನ ಜಾರಿ ಮಾಡಿದೆ, ಹಾಗಾಗಿ ಪ್ರತಿಭಟನೆ ಮೂಲಕ ಆಗ್ರಹ ಪಡಿಸಿದೆ. ಒಂದು ರಾಷ್ಟ್ರೀಯ ಪಕ್ಷದದವರಾಗಿದ್ದು, ವಿನಾಕಾರಣ ಹಿಂದುಳಿದ ವರ್ಗಗಳ ನಾಯಕರದ ಮಾನ್ಯ ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ಬರುವಂತೆ ಈ ರೀತಿ ಹೇಳಿಕೆ ಕೊಟ್ಟ ಒಬ್ಬ ನಾಯಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಹೇಳಿ ಈ ಮೂಲಕ ನಾವು ಆಗ್ರಹಿಸುತ್ತೇವೆ

ವರದಿ: ರಮೇಶ್ ಎನ್
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555



