ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ 16 ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವನ್ನು ನೀಡಿದರು
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿರುವ ಶೇಕಡ 24.1 ಯೋಜನೆ ಅಡಿ ಇಂದು ವಾರ್ಡ್ ನಂಬರ್ 55ರಲ್ಲಿ 16 ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವನ್ನು ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ನೀಡಿದರು
ನಂತರ ಮ ವಿ ರಾಮಪ್ರಸಾದ್ ಅವರು ಮಾತನಾಡುತ್ತಾ ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಲವಾರು ಯೋಜನೆಗಳಿದ್ದು 24.1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯೋಜನೆಗಳಾಗಿದ್ದು ಈ ಯೋಜನೆ ಅಡಿಯಲ್ಲಿ ಹೊಲಿಗೆ ಯಂತ್ರ, ವಿದ್ಯಾರ್ಥಿ ಪ್ರೋತ್ಸಾಹ ಧನ ಮತ್ತು ಇನ್ನು ಹಲವಾರು ಯೋಜನೆಗಳಿದ್ದು ಅದೇ ರೀತಿ 7.5 ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಹಾಗೂ ಓಬಿಸಿ ವರ್ಗದವರಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಪ್ರೋತ್ಸಾಹ ಧನ, ಲ್ಯಾಪ್ಟಾಪ್, ಕೊಡುವಂತದ್ದು, ವೈದ್ಯಕೀಯ ಪ್ರೋತ್ಸಾಹ ಧನ, ಪಕ್ಕಾ ಮನೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿದ್ದು ಇದನ್ನು ನಾಗರೀಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪ್ರತಾಪ್, ರಶ್ಮಿ, ಸ್ವರ್ಣ, ನಂದೀಶ್, ಮುಖಂಡರಾದ ಸಿ ಸಂದೀಪ್, ಮಂಜುನಾಥ್, ಸುಬ್ರಹ್ಮಣ್ಯ ನಾಯಕ್, ಧರ್ಮೇಂದ್ರ, ದೇವೇಂದ್ರ ಸ್ವಾಮಿ, ಸೋಮೇಶ್, ಲಕ್ಷ್ಮಣ್, ರಮೇಶ್ ಮುಂತಾದವರು ಹಾಜರಿದ್ದರು
ವರದಿ :ನಂದಿನಿ ಮೈಸೂರು

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204

