ಮಂಡ್ಯ: ಪಾಳುಬಾವಿಯಲ್ಲಿ ನವಜಾತ ಶಿಶು ಪತ್ತೆ.

ಪಾಂಡವಪುರ ತಾಲ್ಲೂಕು ಕೆರೆತೊಣ್ಣೂರು ಬಳಿಯ
ಚಂದ್ರೆ ಗ್ರಾಮದಲ್ಲಿ ಘಟನೆ…
ಪಾಳುಬಾವಿಯಲ್ಲಿ ಪತ್ತೆಯಾದ ನವಜಾತ ಶಿಶು…..
೩೦ ಅಡಿ ಆಳದ ಪಾಳು ಬಾವಿಗೆ ಎಸೆದು ಹೋಗಿರುವ ನಿರ್ಧಯಿ ತಾಯಿ.
ರಸ್ತೆ ಬದಿಯ ಪಾಳುಬಾವಿಯಲ್ಲಿ ಅಳುತ್ತಿದ್ದ ನವಜಾತ ಶಿಶು.
ಗ್ರಾಮದ ದಾರಿ ಹೋಕರ ಕಣ್ಣಿಗೆ ಬಿದ್ದಿರುವ ನವಜಾತ ಶಿಶು.
ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿರುವ ಸ್ಥಳೀಯರು.
ಸ್ಥಳಿಯರ ಸುದ್ದಿಯ ಮೇರೆಗೆ ಸ್ಥಳಕ್ಕೆ ಹೋಗಿ ನವಜಾತ ಶಿಶು ರಕ್ಷಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು.
ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು.
ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯದಲ್ಲಿ ಚೇತರಿಕೆ.
ವಿಕಸನ ಸಂಸ್ಥೆಯ ಜೋಗುಳ ಕೇಂದ್ರದ ಎಂ.ಜೆ. ಪ್ರಸನ್ನ ರವರ ವಶಕ್ಕೆ ನೀಡಿರುವ ಅಧಿಕಾರಿಗಳು.
ಕಸ ಕಡ್ಡಿಯೇ ತುಂಬಿರುವ ಈ ಪಾಳುಬಾವಿಯಲ್ಲಿ ಬಿದ್ದಿದ್ದರೂ ಸಹ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿರುವ ನವಜಾತ ಶಿಶು .
*ಆಗ ತಾನೆ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿರುವ ನಿರ್ಧಯಿ ತಾಯಿ..
ನಿರ್ದಯಿತಾಯಿಯ ಕೃತ್ಯಕ್ಕೆ ಹಿಡಿಶಾಪ ಹಾಕುತ್ತಿರುವ ಇಡೀ ಸಮಾಜ..
ನಿರ್ಧಯಿ ತಾಯಿಯಿಂದ ಬಾವಿ ಪಾಲಾಗಿದ್ದ ನವಜಾತ ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ಮುತ್ತಿಕೊಂಡಿದ್ದು ಕಚ್ಚಿರುವ ಗುರುತು ಪತ್ತೆ…
ಅನಾಥ ನವಜಾತ ಶಿಶು ಪಾಳುಬಾವಿಯಲ್ಲಿ ಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು…
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ದೂರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



