ಸಿಲಿಂಡರ್ ಸ್ಪೋಟ ಹೊತ್ತಿ ಹುರಿದ ಹೋಟೆಲ್

ಕೊಪ್ಪಳ : ಸಿಲಿಂಡರ್ ಸ್ಪೋಟ ಹೊತ್ತಿ ಹುರಿದ ಹೋಟೆಲ್.

ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ಹೋಟೆಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಭಾರೀ ಅನಾಹುತ ಸಂಭವಿಸಿದೆ ಈ ಘಟನೆ ಬುಧವಾರ ಬೆಳಿಗ್ಗೆ ನಗರದ ಗಡಿಯಾರ ಕಂಬದ ಬಳಿ ಸಂಭವಿಸಿದ್ದು ,
ಹೋಟೆಲ್ ಹಾಗೂ ಟೀ ಪಾಯಿಂಟ್ ಸುಟ್ಟು ಕರಕಲಾಗಿದೆ.

ರಾತ್ರಿ ಹೋಟೆಲ್ ನಲ್ಲಿದ್ದ ಸಿಲಿಂಡರ್ ಸರಿಯಾಗಿ ಆಫ್ ಮಾಡದೆ ಇರೋದ್ರಿಂದ ಇಂದು ಬೆಳಗ್ಗೆ ಲೀಕ್ ಆಗಿ ಸಿಲಿಂಡರ್ ಸ್ಫೋಟ ಗೊಂಡಿದ್ದು .
ಹೋಟೆಲ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿರುವದಲ್ಲದೆ ಹೋಟೆಲ್ ಮುಂಭಾಗದಲ್ಲಿದ್ದ ಬೈಕುಗಳು ಸುಟ್ಟು ಕರಕಲಾಗಿವೆ,

ಹೋಟೆಲ್ ಮೇಲ್ಚಾವಣಿ ಎರಡು ಕೊಠಡಿಗಳಿದ್ದು
ಅದರಲ್ಲಿ ವಾಸ ಮಾಡುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ, ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿ ಜನರನ್ನ ರಕ್ಷಣೆ ಮಾಡಿದ್ದಾರೆ ,

ಜನನಿ ಬೀಡು ಪ್ರದೇಶದಲ್ಲಿರೋ ಹೋಟೆಲ್​​ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು ಕಂಡುಬಂತು. ಸಿಲಿಂಡರ್ ಸ್ಫೋಟ ಗೊಂಡಿದ್ದ ರಿಂದ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ.

ವರದಿ : ನಂದಿನಿ ಮೈಸೂರು

Leave a Reply

Your email address will not be published. Required fields are marked *