
ನಂದಿನಿ ಮೈಸೂರು
ಬೆಂಗಳೂರಿನ ಪ್ರವರ ಥಿಯೇಟರ್ ರಂಗ ತಂಡದಿಂದ ಫೆ. ೨೬ ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಕೃತಿ ಆಧರಿಸಿದ ಸಾಕ್ಷ್ಯ ನಾಟಕ ಪ್ರದರ್ಶಿಸುತ್ತಿರುವುದಾಗಿ ನಿರ್ದೇಶಕ ಹನು ರಾಮಸಂಜೀವ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಾಮಂದಿರದ ಕಿರು ರಂಗಮಂದಿರದಲ್ಲಿ
ಸಂಜೆ 4 ಹಾಗೂ 7 ಗಂಟೆಗೆ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ನಾಟಕ ಪ್ರದರ್ಶನಗೊಳ್ಳಲಿದೆ. ಮಹಾಕವಿ ಕುವೆಂಪು ಅವರ ಜೀವನದ ಹಲವು ಮಹತ್ವದ ಅಧ್ಯಾಯಗಳಿವೆ. ಒಂದರ್ಥದಲ್ಲಿ ಪೂರ್ಣಚಂದ್ರ ತೇಜಸ್ವಿ ಹುಟ್ಟಿದಂದಿನಿಂದ ಇಲ್ಲಿವರೆಗಿನ ಕುವೆಂಪು ಅವರ ಕಥೆ ಒಳಗೊಂಡಿದೆ. ಇದು ತೇಜಸ್ವಿಯವರ ಆತ್ಮಕತೆಯ ಹಲವು ಅಧ್ಯಾಯಗಳೂ ಆಗಿದೆ. ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿ ಮಹತ್ವಪೂರ್ಣ ಪಾತ್ರದಿಂದಾಗಿ ಇದು ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯವೂ ಆಗಿದೆ. ಹೀಗಾಗಿ ಈ ನಾಟಕ ಮಹತ್ವದ್ದಾಗಿದೆ.ಎಲ್ಲರೂ ಬಂದು ನಾಟಕ ವೀಕ್ಷಿಸುವಂತೆ ಮನವಿ ಮಾಡಿದರು.



