ಮಧ್ಯಪ್ರದೇಶ : ಮಧ್ಯಪ್ರದೇಶದ ಇಸ್ಲಾಂ ನಗರಕ್ಕೆ ಜಗದೀಶ್‌ಪುರ ಎಂದು ಮರುನಾಮಕರಣ.
ಮಧ್ಯಪ್ರದೇಶ ಸರ್ಕಾರವು ಭೋಪಾಲ್‌ನಲ್ಲಿರುವ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿದ್ದು, ಈ ಗ್ರಾಮಕ್ಕೆ ಜಗದೀಶ್‌ಪುರ ಎಂದು ಮರು ನಾಮಕರಣ ಮಾಡಿದೆ.
ರಾಜ್ಯ ಸರ್ಕಾರವು ಹೆಸರು ಬದಲಾವಣೆಗೆ ಗೆಜೆಟ್ ಆದೇಶದ ಮೂಲಕ ಸೂಚನೆ ನೀಡಿದೆ. “ಭಾರತ ಸರ್ಕಾರ ಗೃಹ ಸಚಿವಾಲಯದ ಒಪ್ಪಿಗೆಯ ಮೇರೆಗೆ ರಾಜ್ಯ ಸರ್ಕಾರವು ಭೋಪಾಲ್ ಜಿಲ್ಲೆಯ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಗದೀಶ್‌ಪುರ ಎಂದು ಬದಲಾಯಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಸ್ಲಾಂ ನಗರವು ಭೋಪಾಲ್-ಬೆರಾಸಿಯಾ ಹೆದ್ದಾರಿಯ ಮಧ್ಯಭಾಗದಲ್ಲಿದೆ. ಇದು ಭೋಪಾಲ್ ನಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿದೆ. ‘ಇಸ್ಲಾಂ ನಗರ’ ಒಂದು ಕಾಲದಲ್ಲಿ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು.
ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



