ಕಂಬಳದಲ್ಲಿ ಸಾನಿಯಾ ಅಯ್ಯರ್ ಗೆ ಕಿರುಕುಳ

ಕಂಬಳ ವೀಕ್ಷಣೆಗೆ ಬಂದಿದ್ದ ನಟಿ ಸಾನ್ಯಾ ಅಯ್ಯರ್ ಮೇಲೆ ಕಿರುಕುಳ ಆರೋಪ

ಪುತ್ತೂರು: ಕಂಬಳ ವೀಕ್ಷಣೆಗೆಂದು ಬಂದಿದ್ದ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಸಾನ್ಯಾ ಅಯ್ಯರ್ ಅವರನ್ನು ಯುವಕನೋರ್ವ ಕೈ ಹಿಡಿದೆಳೆದು ಕಿರುಕುಳ ನೀಡಿದ್ದು, ಇದರಿಂದ ಕೋಪಗೊಂಡ ನಟಿ ಕಪಾಳಮೋಕ್ಷ ನಡೆಸಿರುವ ಘಟನೆ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳದಲ್ಲಿ ನಡೆದಿದೆ.
ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಾನ್ಯಾ ಕಂಬಳ ವೀಕ್ಷಿಸುತ್ತಿದ್ದರು. ಈ ವೇಳೆ ಸೆಲ್ಫಿ ತೆಗೆಯುವ ನೆಪದಲ್ಲಿ ಬಂದ ಯುವಕನೊಬ್ಬ ಸಾನ್ಯಾ ಮತ್ತು ಸ್ನೇಹಿತೆಯರ ಕೈ ಎಳೆದು ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ತಕ್ಷಣಕ್ಕೆ ಪ್ರತಿಕ್ರಿಯಿಸಿದ ಸಾನ್ಯಾ ಕೈ ಹಿಡಿದೆಳೆದ ಯುವಕನ ಕಪಾಳಕ್ಕೆ ಬಾರಿಸಿದ್ದಾಗಿ ತಿಳಿದು ಬಂದಿದೆ. ಆದರೆ ಯುವಕ ಕೂಡಾ ಸಾನ್ಯಾ ಮೇಲೆ ಕೈ ಮಾಡಿದ್ದಾಗಿ ಆರೋಪಿಸಲಾಗಿದೆ.
ಅಲ್ಲದೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.

ವರದಿ:ನಂದಿನಿ ಮೈಸೂರು

Leave a Reply

Your email address will not be published. Required fields are marked *