ಮಾಡುವ ಕೆಲಸದಲ್ಲಿ ಧರ್ಮದ ಅಂಶವಿರಲಿ: ರಾಮದಾಸ್

ನಂದಿನಿ ಮೈಸೂರು

ಮಾಡುವ ಕೆಲಸದಲ್ಲಿ ಧರ್ಮದ ಅಂಶವಿರಲಿ: ರಾಮದಾಸ್


ಪ್ರತೀಯೊಬ್ಬರೂ ತಾವು ಮಾಡುವ ಕೆಲಸದಲ್ಲಿ ಧರ್ಮವನ್ನು ಇರಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.


ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೫೭ನೇ ವಾರ್ಡಿನಲ್ಲಿ ಆಯೋಜಿಸಲಾಗಿದ್ದ ಮಧ್ವನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವೈತ, ಅದ್ವೈತ ಹಾಗೂ ವಿಶಿಷ್ಟಾದ್ವೈತದ ಮೂಲಕ ಪ್ರಪಂಚಕ್ಕೆ ದೊಡ್ಡ ಕೊಡುಗೆ ಸಂದಿದೆ. ಈ ದೃಷ್ಟಿಯಲ್ಲಿ ಮಧ್ವಾಚಾರ್ಯರು ಶಂಕರಾಚಾರ್ಯರ ವಿಚಾರಗಳ ಬಗ್ಗೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇವತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಧಾರ್ಮಿಕ ಬದುಕನ್ನು ನಡೆಸುವುದರ ಜೊತೆಗೆ ತನ್ನ ಕರ್ತವ್ಯದಲ್ಲಿ ಧರ್ಮವನ್ನು ಕಾಣಬೇಕು ಎಂಬ ವಿಚಾರಧಾರೆಯನ್ನು ಕೊಟ್ಟಂತಹ‌ ಮಧ್ವಾಚಾರ್ಯರ ವಿಚಾರವನ್ನು ಸಮಾಜಕ್ಕೆ ಅರ್ಪಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಡಾ.ಲಕ್ಷ್ಮೀನಾರಾಯಣ ಶಣೈ, ಡಾ.ಪುಷ್ಪ,ಡಾ.ರಾಜೇಶ್ವರಿ, ಎಂ.ಆರ್.ಬಾಲಕೃಷ್ಣ, ಓಂಶ್ರೀನಿವಾಸ್, ದೇವರಾಜೇಗೌಡ, ಡಿಪೊ ರವಿ, ರವಿ,ಪ್ರದೀಪ್, ಮತ್ತಿತರರು ಉಪಸ್ಥಿತರಿದ್ದರು. ಇದಾದ ಬಳಿಕ ಕುವೆಂಪುನಗರದ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಸವಲತ್ತುಗಳ ಅದಾಲತ್, ವಾರ್ಡಿನ ಸಮಸ್ಯೆಗಳ ಪರಿಹಾರ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Leave a Reply

Your email address will not be published. Required fields are marked *