ಭವಾನಿ ರೇವಣ್ಣಗೆ ಬಿಜೆಪಿಯಿಂದ ಟಿಕೆಟ್: ಸಿ.ಟಿ ರವಿ

ಚಿಕ್ಕಮಗಳೂರು : ಭವಾನಿ ರೇವಣ್ಣಗೆ ಬಿಜೆಪಿಯಿಂದ ಟಿಕೆಟ್: ಸಿ.ಟಿ ರವಿ.

ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಹಾಸನ ಕ್ಷೇತ್ರದಿಂದ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಸಹೋದರಿ ಭವಾನಿ ರೇವಣ್ಣ ಹೇಳಿದ್ದಾರೆ. ಆದರೆ ಅಲ್ಲಿ ಬೇರೆ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ಭವಾನಿ ಅವರು ಬಿಜೆಪಿಗೆ ಬಂದರೆ ಅವರಿಗೆ ಸ್ವಾಗತ. ಅವರು ಬಂದಲ್ಲಿ ಹೊಳೆನರಸಿಪುರದಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದರು.
ಭವಾನಿ ಅವರಿಗಿಂತ ಒಳ್ಳೆ ಅಭ್ಯರ್ಥಿ ಹೊಳೆನರಸಿಪುರಕ್ಕೆ ಬೇರಾರಿಲ್ಲ. ಅವರು ಪಕ್ಷಕ್ಕೆ ಬಂದಲ್ಲಿ ಖಂಡಿತಾ ಈ ಆಫರ್ ರನ್ನು ಅವರಿಗೆ ನೀಡುತ್ತೇವೆ. ರೇವಣ್ಣ ಮತ್ತು ಭವಾನಿ ಅವರ ನಡುವೆ ಗಲಾಟೆ ಹಚ್ಚುವ ಕೆಲಸಕ್ಕೆ ನಾನು ಮುಂದಾಗುವುದಿಲ್ಲ. ಹಾಸನದ ರಾಜಕೀಯವನ್ನು ಹತ್ತಿರದಿಂದ ನೋಡಿದ್ದೇನೆ ಎಂದವರು ತಿಳಿಸಿದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *