ಭಾರತ-ಫ್ರಾನ್ಸ್‌ ನೌಕಾ ಪಡೆಯ ಜಂಟಿ ಕವಾಯತು ಆರಂಭ

ನವದೆಹಲಿ : ಭಾರತ-ಫ್ರಾನ್ಸ್‌ ನೌಕಾ ಪಡೆಯ ಜಂಟಿ ಕವಾಯತು ಆರಂಭ.

ಭಾರತ ಮತ್ತು ಫ್ರಾನ್ಸ್‌ ನೌಕಾಪಡೆಯ 21ನೇ ಜಂಟಿ ಕವಾಯತು ಪಶ್ಚಿಮ ಸಮುದ್ರತೀರದಲ್ಲಿ ಸೋಮವಾರ ಆರಂಭಗೊಂಡಿದೆ ಎಂದು ನೌಕಾಪಡೆ ಹೇಳಿದೆ.
1993ರಲ್ಲಿ ಆರಂಭವಾದ ಈ ಜಂಟಿ ಕವಾಯತಿಗೆ 2001ರಲ್ಲಿ ‘ವರುಣಾ’ ಎಂದು ನಾಮಕರಣ ಮಾಡಲಾಯಿತು.
ಇದು ಭಾರತ ಮತ್ತು ಫ್ರಾನ್ಸ್‌ ನಡುವಿನ ದ್ವಿಪಕ್ಷೀಯ ಸಹಕಾರ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್‌ ಚೆನ್ನೈ, ಐಎನ್‌ಎಸ್‌ ಟೆಗ್‌ ಸಮರ ನೌಕೆಗಳು ಹಾಗೂ ಫ್ರಾನ್ಸ್‌ನ ನೌಕಾಪಡೆಯ ವಿಮಾನವಾಹಕ ನೌಕೆ ಚಾರ್ಲ್ಸ್ ಡಿ ಗೌಲ್ ಭಾಗಿಯಾಗಿವೆ ಎಂದೂ ವಿವರಿಸಿದೆ.
ಈ ಕವಾಯತು ಜನವರಿ 20ರ ವರೆಗೆ ನಡೆಯಲಿದೆ ಎಂದಿದೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *