“ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರು: ವಾರ್ಡಿನ ಜನರಿಂದ ಸಹಾಯ ಹಸ್ತ”

ಮೈಸೂರು: ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಿಕಲಚೇತನರ ಕೋಟಾದಡಿಯಲ್ಲಿ ಮನೆ ಮಂಜೂರಾಗಿದ್ದು, ವಾರ್ಡ್ ನಂ.61 ಜನರು ಸಂದಾಯ ಹಣ ಸಹಾಯ ಮಾಡಿದ್ದಾರೆ.

ವಿಕಲಚೇತನ ನಟರಾಜುರವರಿಗೆ ಅಗತ್ಯವಾದ
24,720 ರೂಪಾಯಿಗಳ ಚೆಕ್ ಅನ್ನು ಕಲ್ಯಾಣ ಮಂಟಪ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಸುನೀಲ್ ಮಾತನಾಡಿ ನಟರಾಜುರವರು ವಿಕಲಚೇತನರಾಗಿದ್ದು ನನಗೆ ಕರೆ ಮಾಡಿ ಸಹಾಯ ಧನ ಮಾಡುವಂತೆ ಮನವಿ ಮಾಡಿದ್ದರು.ನಮ್ಮ ವಾರ್ಡಿನ ಸಮಸ್ಯೆ ಆಲಿಸಲು ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದು ಅದರಲ್ಲಿ ನಟರಾಜುರವರಿಗೆ ಸಹಾಯ ಮಾಡುವಂತೆ ಸಂದೇಶ ರವಾನಿಸಿದ್ದೇವು.ಇದನ್ನು ಆಲಿಸಿದ ವಾರ್ಡಿನ ಜನರು ಹಣ ಸಹಾಯ ಮಾಡಿದ್ದಾರೆ.

ದೀಪಾವಳಿಗೆ ಪಟಾಕಿ ಹಚ್ಚಿ ಸುಡುವ ಬದಲು ವಿಕಲಚೇತನ ನಟರಾಜುರವರಿಗೆ ಸಹಾಯ ಮಾಡಿ ಅವನ ಹೊಸ ಮನೆಯಲ್ಲಿ ದೀಪ ಹಚ್ಚುವಂತೆ ಒಂದು ಅಳಿಲು ಸೇವೆ ಮಾಡಿದ್ದೇವೆ ಎಂದು ಸಹಾಯ ಹಸ್ತ ಚಾಚಿದ ವಾರ್ಡಿನ ಜನರಿಗೆ ಧನ್ಯವಾದ ತಿಳಿಸಿದರು.

ಬೈಟ್: ಸುನೀಲ್
ಬೈಟ್:ಸತ್ಯನಾರಾಯಣ್

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಶೋಭಾ ಸುನೀಲ್, ವಕೀಲರಾದ ಶ್ರೀನಿವಾಸ್,ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮೇಂದ್ರ, ಕೃಷ್ಣಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *