
ಬೆಂಗಳೂರು
ಬೆಂಗಳೂರಲ್ಲಿ ಮಹಿಳೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನವವಿವಾಹಿತೆ
ನಿಹಾರಿಕಾ ಸಾವನ್ನಪ್ಪಿದ ದುರ್ದೈವಿ.
ಕಳೆದ 5 ವರ್ಷಗಳಿಂದ ಕಾರ್ತಿಕ್ ಹಾಗೂ ನಿಹಾರಿಕಾ ಪ್ರೀತಿಸುತ್ತಿದ್ದರು.ಜೀವನದಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ನಿಹಾರಿಕಾ ಜೂನ್ 1 ರಂದು
ಕಾರ್ತಿಕ್ ಜೊತೆ ಸಪ್ತಪದಿ ತುಳಿದಿದ್ದರು.ಮದುವೆಯ ನಂತರ ಬೆಂಗಳೂರಿಗೆ ತೆರಳಿದ ನವದಂಪತಿಗಳು ಅಲ್ಲಿಯೇ ವಾಸವಾಗಿದ್ದರು.ಕಾರ್ತಿಕ್ ಇಂಜೀನಿಯರ್ ವೃತ್ತಿಯಲ್ಲಿದ್ದರೇ ನಿಹಾರಿಕಾ
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು.ಮದುವೆಯಾಗಿ 4 ತಿಂಗಳಲ್ಲಿ
ಗಂಡನ ಕಿರುಕುಳ ತಾಳಲಾರದೆ ಅಕ್ಕನ ಮನೆ ಸೇರಿದ್ದ ನಿಹಾರಿಕಾ.ಕಳೆದ ಎರಡು ದಿನಗಳ ಹಿಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಹೇಳಿ ನಿಹಾರಿಕಳನ್ನು ಕಾರ್ತಿಕ್ ಮನೆಗೆ ಕರೆದುಕೊಂಡು ಹೋಗಿದ್ದ.
ಶನಿವಾರ ಶಾಲೆಯ ಕಾರ್ಯಕ್ರಮಕ್ಕೆ ತೆರಳುವ ವಿಚಾರವಾಗಿ ನಿಹಾರಿಕಾಳಿಗೆ ಪತಿ ಕಾರ್ತಿಕ್ ನಿಂಧಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಕಾರ್ತಿಕ್ ಕೊಲೆ ಮಾಡಿದ್ದಾನೆ ಎಂದು ತಂದೆ ಶಿವಕುಮಾರ್ (ಅಶೋಕ್ ) ಹಾಗೂ ಅಕ್ಕ ಶೃತಿ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಸ್ತೆಯಲ್ಲಿ ಸಿಕ್ಕಿದ್ದ ನಾಯಿಯನ್ನು ಸಾಕಿದ್ದ ನಿಹಾರಿಕಾ .ನಿಹಾರಿಕಳಾ ಸಾವಿಗೆ ಶ್ವಾನವೂ ಕೂಡ ಕಣ್ಣೀರಿಟ್ಟಿದೆ.ನಿಹಾರಿಕಳನ್ನು ಕಳೆದುಕೊಂಡ ಪೋಷಕರು,ಕುಟುಂಬಸ್ಥರು ರೋಧಿಸುತ್ತಿದ್ದದ್ದು ಎಲ್ಲರ ಮನಕಲಕುವಂತಿತ್ತು.
ನಂದಿನಿ ಮೈಸೂರು



