“ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಜಿ.ಟಿ ದೇವೇಗೌಡ”

ಮೈಸೂರು: ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಜಿ.ಟಿ ದೇವೇಗೌಡ.

ಚಾಮುಂಡೇಶ್ವರಿಗೆ ಜಿ.ಟಿ.ಡಿ, ಹುಣಸೂರಿಗೆ ಜಿ.ಟಿ.ಡಿ‌ ಮಗ ಹರೀಶ್‌ಗೌಡ, ಕೆ.ಆರ್ ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ತಿ.ನರಸೀಪುರಕ್ಕೆ ಅಶ್ಚಿನ್‌ಕುಮಾರ್, ಎಚ್.ಡಿ. ಕೋಟೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಬಹುತೇಕ ಅಂತಿಮ ಎಂದು ಪ್ರಕಟಿಸಿದ ಜಿ.ಟಿ.ಡಿ

ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ.

ಇನ್ನೂ ಯಾವ ಗೊಂದಲಗಳು ಉಳಿದಿಲ್ಲ. ಚಾಮುಂಡಿ ತಾಯಿಗೆ ಎಚ್‌.ಡಿ. ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿ ಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ.

ಜನವರಿ ತಿಂಗಳಿನಲ್ಲಿ ಎಚ್.ಡಿ. ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ಎಚ್.ಡಿ. ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *