“ಕುಸಿದಿರುವ ಕಾಲುವೆಗೆ(ಅಕ್ವಿಡೆಕ್) ಶಾಶ್ವತವಾಗಿ ಡೆಕ್ ನಿರ್ಮಾಣ‌”

ಮೈಸೂರು: ಕುಸಿದಿರುವ ಕಾಲುವೆಗೆ(ಅಕ್ವಿಡೆಕ್) ಶಾಶ್ವತವಾಗಿ ಡೆಕ್ ನಿರ್ಮಾಣ‌.

ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೆ.ಆರ್.ನಗರ ಟೌನ್ ನ ಸಮೀಪದಲ್ಲಿರುವ ಕಂಠೇನಹಳ್ಳಿ ಸ್ಮಶಾನದ ಹತ್ತಿರ ಚಾಮರಾಜ ಬಲದಂಡೆ ನಾಲೆಯ 9ನೇ ಬ್ರಾಂಚ್ ನ ಹತ್ತಿರ ಕಾಲುವೆ (ಅಕ್ವಿಡೆಕ್) ಕುಸಿದಿದ್ದು.

ಈ ಬಗ್ಗೆ ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಇಂಜಿನಿಯರ್ ಮತ್ತು ಅಧೀಕ್ಷಕ ಇಂಜಿನಿಯರ್ ಹಾಗೂ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳಿಂದ ಸ್ಥಳ ತನಿಖೆ ಮಾಡಿಸಿ, ಕುಸಿದಿರುವ ಕಾಲುವೆಗೆ(ಅಕ್ವಿಡೆಕ್) ಶಾಶ್ವತವಾಗಿ ಡೆಕ್ ನಿರ್ಮಾಣ‌ ಮಾಡಲು ಅಂದಾಜು ರೂ. 2.50 ಕೋಟಿಗಳನ್ನು ಮಾನ್ಯ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಸಾ.ರಾ.‌ ಮಹೇಶ್ ರವರು ಮಂಜೂರು ಮಾಡಿಸಿದ್ದು,

ಪ್ರಸ್ತುತ ರೈತರ ಬೆಳೆಗಳಿಗೆ ಹಾನಿಯಾಗದಂತೆ ತಾತ್ಕಾಲಿಕವಾಗಿ ನೀರು ಹರಿಸುವ ಉದ್ದೇಶಕ್ಕಾಗಿ, ಪೈಪ್ ಗಳನ್ನು ವೆಲ್ಡಿಂಗ್ ಮಾಡಿ ಅಳವಡಿಸಿ, ಪೈಪ್ ಗಳ ಮೂಲಕ ನೀರನ್ನು ಹರಿಸುವ ಕಾಮಗಾರಿಗೆ, ಮಾನ್ಯ ಶಾಸಕರು‌ ಇಂದು ಚಾಲನೆ ನೀಡಿದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *