ಮೈಸೂರು : ಮೈಸೂರಿನ ಶಕ್ತಿಧಾಮದಲ್ಲಿ ಆರಂಭವಾದ ಗ್ರಂಥಾಲಯಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ.

ಶಕ್ತಿಧಾಮದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಂಥಾಲಯ ಆರಂಭಕ್ಕೆ ಚಾಲನೆ ನೀಡಿದ ಯದುವೀರ್ ಒಡೆಯರ್. ಕಲಿಸು ಫೌಂಡೇಶನ್ ಸಂಸ್ಥೆಯ ವತಿಯಿಂದ 75ನೇ ಗ್ರಂಥಾಲಯ ಶಕ್ತಿಧಾಮದಲ್ಲಿ ಉದ್ಘಾಟನೆ.
ಹ್ಯಾಟ್ರಿಕ್ ಹೀರೋ ಡಾ ಶಿವರಾಜಕುಮಾರ್, ಶಕ್ತಿ ಧಾಮದ ಟ್ರಸ್ಟಿ ಗೀತಾ ಶಿವರಾಜಕುಮಾರ್, ಕಲಿಸು ಫೌಂಢೇಶನ್ ನ ಸಂಸ್ಥಾಪಕ ನಿಖಿಲೇಶ್ ಹಾಗು ಶಕ್ತಿ ಧಾಮದಲ್ಲಿ ಆಶ್ರಯ ಪಡೆದಿರುವ ಮಕ್ಕಳು ಉಪಸ್ಥಿತಿ.
ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಅರಮನೆಯ ಕೋಟೆ ಗೋಡೆ ಶಿಥಿಲಗೊಂಡಿರುವ ಬಗ್ಗೆ ಈ ಮೊದಲೇ ವರದಿಯಾಗಿತ್ತು. ಆದರೆ ದುರಸ್ತಿಗೂ ಮೊದಲೇ ಕೋಟೆ ಗೋಡೆ ಕುಸಿದು ಬಿದ್ದಿದೆ.

ಕುಸಿದು ಬಿದ್ದಿರುವ ಮೈಸೂರು ಅರಮನೆಯ ಕೋಟೆ ಗೋಡೆಯನ್ನು ಆದಷ್ಟು ಬೇಗ ದುರಸ್ತಿಗೊಳಿಬೇಕು.
ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಮುಂದಾಗಬೇಕು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ.
ಶಕ್ತಿಧಾಮದಲ್ಲಿ ಗ್ರಂಥಾಲಯ ಸ್ಥಾಪನೆಯಾಗಿರುವುದು ಸಂತಸ ತಂದಿದೆ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಲಿಸು ಫೌಂಡೇಶನ್ ಸಂಸ್ಥೆ ವತಿಯಿಂದ 75 ನೇ ಗ್ರಂಥಾಲಯ ಶಕ್ತಿಧಾಮದಲ್ಲಿ ಆರಂಭವಾಗಿದ್ದು ಹೆಮ್ಮೆಯ ವಿಷಯವಾಗಿದೆ.
ಮೈಸೂರು ರಾಜವಂಶಸ್ಥ ಯದವೀರ್ ಅವರು ಗ್ರಂಥಾಲಯ ಉದ್ಘಾಟಿಸುವುದರ ಜೊತೆಗೆ ಶಕ್ತಿಧಾಮದ ಮಕ್ಕಳಿಗೆ ಪಾಠ ಮಾಡುತ್ತೇನೆಂದು ಹೇಳಿದ್ದು ನಮ್ಮ ಸೌಭಾಗ್ಯವಾಗಿದೆ. ಶಕ್ತಿಧಾಮದ ಶ್ರೇಯೋಭಿವೃದ್ದಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೇಳಿಕೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

