ಮೈಸೂರು: ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ
ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ
ಆಯೋಜಿಸಿದ್ದ ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು ಆನಂತರ ಸ್ಪರ್ಧಿಸಿದ ಎಲ್ಲ ಸ್ಪರ್ಧಾಳುಗಳಿಗೆ ಅಭಿನಂದನ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಿಗೆ ಮಹಾಪೌರರಾದ ಶಿವಕುಮಾರ್ ಬಹುಮಾನ ವಿತರಿಸಿ ವಿಜೇತರಿಗೆ ಶುಭ ಕೋರಿದರು.
ಮೊದಲನೇ ಬಹುಮಾನ ಪಡೆದ
ಬೋಗಾದಿ ನಿವಾಸಿ ರೇವತಿ ರಾಮಸ್ವಾಮಿ,
ದ್ವಿತೀಯ ಬಹುಮಾನ ಪಡೆದ
ಅಲನಹಳಿ ಯ ಗಿರಿದರ್ಶಿನಿ ಬಡಾವಣೆಯ ನಿವಾಸಿ ಗೀತಾ ಶ್ರೀಹರಿ ,ತೃತೀಯ ಬಹುಮಾನ ಕುವೆಂಪು ನಗರದ ನಿವಾಸಿ ಇಂದ್ರಾಣಿ ಶಂಕರ ರವರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ಮೊದಲನೇ ಬಹುಮಾನ ನಗದು 2000ರೂ ದ್ವಿತೀಯ 1000ರೂಹಾಗೂ ತೃತೀಯ
500ರೂ ನಗದು ಬಹುಮಾನ ನೀಡಿ
ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಿ ಅಭಿನಂದಿಸಲಾಯಿತು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಉತ್ತಮವಾಗಿ ಗೊಂಬೆಗಳನ್ನು ಜೋಡಣೆ ಮಾಡಿದ 10ಸ್ಪರ್ಧಿಗಳದ
ದಟ್ಟಗಳ್ಳಿ ನಿವಾಸಿ ವರ್ಷ ,
ದಟ್ಟಗಳ್ಳಿ ರಾಣಿ ನಾಗಭೂಷಣ್,
ವಿಜಯನಗರ ನಿವಾಸಿ ಜಯಶ್ರೀ ಶಿವರಾಂ ,
ರಾಮಕೃಷ್ಣನಗರ ನಿವಾಸಿ ಜ್ಯೋತಿ ಕೆ ಆರ್ ,
ಶಿವರಾಂ ಪೇಟೆಯ ಪ್ರಭಾವತಿ ,
ಬೃಂದಾವನ ಬಡಾವಣೆ
ತನುಜಾ ಅರವಿಂದ್,
ಕುವೆಂಪು ನಗರ ನಿವಾಸಿ ರಾಜೇಶ್ವರಿ ಗಣೇಶನ್,
ರಾಮಕೃಷ್ಣನಗರ
ಜಯಲಕ್ಷ್ಮೀ ನರಸಿಂಹ.
ಜೆಪಿ ನಗರ
ಲೀಲಾವತಿ,ಸರಸ್ವತಿಪುರಂನ ಭಾನುಮತಿ,
ವಿಶೇಷವಾಗಿ ಸಮಾಧಾನಕರ ಬಹುಮಾನ ನೀಡಿ ಗೌರವಿಸಿ ಅಭಿನಂದಿಸಲಾಯಿತು
ಸ್ಪರ್ಧಿಸಿದ ಎಲ್ಲ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ನಮ್ಮ ಕರೆಗೆ ಓಗೊಟ್ಟು ರಾಜ್ಯದ ಹಲವು ಕಡೆಯಿಂದ 150 ಕ್ಕೂ ಹೆಚ್ಚು ಜನ
ನಮ್ಮ ವಾಟ್ಸ್ ಅಪ್ ಗೆ ಅವರ ನಿವಾಸದಲ್ಲಿ ಕೂರಿಸಿರುವ ಗೊಂಬೆಗಳ ಈ ಚಿತ್ರಗಳನ್ನು ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅದರಲ್ಲಿ
ಮೈಸೂರಿಗೆ ಮಾತ್ರ ಸೀಮಿತಗೊಳಿಸಿ
96ಸ್ಪರ್ಧಿಗಳನ್ನು ಅಂತಿಮಗೊಳಿಸಿ ಅವರವರ ನಿವಾಸಕ್ಕೆ ತೆರಳಿ ನುರಿತ ತೀರ್ಪುಗಾರರು ವೀಕ್ಷಣೆ ಮಾಡಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಮಹಾಪೂರದ ಶಿವಕುಮಾರ
ನವರಾತ್ರಿ ಹಬ್ಬದ ಆಚರಣೆ ಬೊಂಬೆಗಳ ಪ್ರದರ್ಶನ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹಿರಿಮೆ, ನವದುರ್ಗೆಯರನ್ನು 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಹೆಣ್ಣುಮಕ್ಕಳ ಪಾಲಿಗೆ ವಿಶೇಷ. ದೇವಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ದೇವಿಗೆ ನೈವೇದ್ಯ ನೀಡುವುದು, ಸಾಯಂಕಾಲ ಮುತ್ತೈದೆ, ಮಕ್ಕಳನ್ನು ಮನೆಗೆ ಕರೆದು ಅರಶಿನ-ಕುಂಕುಮ, ಬಾಗಿನ,ತಿನಿಸು ಕೊಡುವ ಶಾಸ್ತ್ರ ಸಂಪ್ರಾದಯ ನೂರಾರು ವರುಷಗಳಿಂದ ನಡೆದುಕೊಂಡು ಬಂದಿದೆ ಇದು ನಮ್ಮ ಹಿಂದೂ ಧರ್ಮಕ್ಕೆ ಶಕ್ತಿಯಿದ್ದಂತೆ ಎಂದರು,
ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ ಮಾತನಾಡಿ
ದಸರಾ ಗೊಂಬೆ ಕೂರಿಸುವ ಪದ್ಧತಿ 18 ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿದೆ, ಪ್ರಸ್ತುತ ಜೀವನ ಕ್ರಮದಲ್ಲಿ ಇದು ಕಡಿಮೆ ಕಾಣಲು ಸಿಗುತ್ತದೆ. ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು. ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಬೇಕಾಗುತ್ತದೆ.ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಮಹಾಪೌರರಾದ ಶಿವಕುಮಾರ್ ,ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಮಹರ್ಷಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೇಜಸ್ ಶಂಕರ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್,ಸುಚೀಂದ್ರ, ಚಕ್ರಪಾಣಿ,ನಾಗಶ್ರೀ ,ಸದಾಶಿವ್ ,ಮಾಧ್ವ ,
ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

