ಕೆ.ಆರ್.ಪೇಟೆ: ಅಮಾಯಕನಿಗೆ ವಂಚಿಸಿ ಸಹಿ ಮಾಡಿಸಿಕೊಂಡಿರುವ ಪೋಲೀಸ್ ಅಧಿಕಾರಿಗಳ ವಿರುದ್ದ ಕ್ರಮ ವಹಿಸದ ಮಂಡ್ಯ ಎಸ್.ಪಿ ವಿರುದ್ಧ ಲೋಕಾಯುಕ್ತಕ್ಕೆ ದೂರು.

ಪ್ರಕರಣ ತನಿಖೆಗೆ ಎಂದು ಠಾಣೆಗೆ ಮುರುಗೇಶ್ ಎಂಬ ವ್ಯಕ್ತಿಯನ್ನು ಕರೆಸಿಕೊಂಡಿದ್ದ ಈ ಹಿಂದೆ ಎಸ್.ಐ ಆಗಿದ್ದ ಬ್ಯಾಟರಾಯಿಗೌಡ ಅವರು ಮುರುಗೇಶ್ ಎಂಬುವವರ ಮೊಬೈಲ್ ಪಡೆದುಕೊಂಡು ವಾಪಾಸ್ ನೀಡದಿರುವ ಬಗ್ಗೆ ಮುರುಗೇಶ್ ಮೇಲಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನಂತೆ ಮೊಬೈಲ್ ವಾಪಾಸ್ ನೀಡಲು ಠಾಣೆಗೆ ಮತ್ತೆ ಮುರುಗೇಶ್ ಅವರನ್ನು ಕರೆಸಿಕೊಂಡಿದ್ಸ ಕೆ.ಆರ್.ಪೇಟೆ ಪಟ್ಟಣ ಪೋಲೀಸ್ ಠಾಣೆಯ ಪೋಲೀಸರು ಮುರುಗೇಶ್ ಅವರಿಂದ ಏಳು ಪತ್ರಕ್ಕೆ ಸಹಿ ಮಾಡಿಸಿಕೊಂಡು ಮೊಬೈಲ್ ನೀಡಿದ್ದಾರೆ..
ಆದರೆ ಓದಲು ಬಾರದ ಮುರುಗೇಶ್ ಅವರಿಗೆ ವಂಚಿಸಿ ಏಳು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದಾಗ ಮಾಹಿತಿ ಹಕ್ಕು ಕಾಯ್ದೆ ಯ ಅಡಿಯಲ್ಲಿ ಮಾಹಿತಿ ಪಡುಕೊಂಡು ನೋಡಿದಾಗ ಮೊಬೈಲ್ ಅನ್ನು ನಾನೇ ಕಳೆದುಕೊಂಡಿದ್ದೆ ಬ್ಯಾಟರಾಯಿಗೌಡ ಅವರು ಪಡೆದುಕೊಂಡಿರಲಿಲ್ಲಾ ಹಾಗಾಗಿ ತಪ್ಪಾಗಿ ನಾನು ದೂರು ನೀಡಿದ್ದು, ಪ್ರಕರಣವನ್ನು ಮುಕ್ತಾಯ ಮಾಡಿ ಎಂದು ಬರೆದುಕೊಂಡು ಓದಲು ಬಾರದ ಮುರುಗೇಶ್ ಅವರಿಗೆ ವಂಚನೆ ಮಾಡಿರುವುದು ತಿಳಿದು ಬಂದಿದೆ.
ಈ ಬಗ್ಗೆ ಮುರುಗೇಶ್ ಎಸ್.ಪಿ ಯವರಿಗೆ ದೂರು ನೀಡಿ ಏಳು ಪತ್ರಗಳನ್ನು ತರಿಸಿ ವಿಚಾರಣೆ ಮಾಡಲು ಮನವಿ ಮಾಡಿದ್ದರೂ ಎಸ್.ಪಿ ಯವರು ನಿರ್ಲಕ್ಷ್ಯ ವಹಿಸಿರುವುದರಿಂದ ಎಸ್.ಪಿ ವಿರುದ್ದವೇ ಲೋಕಾಯುಕ್ತಕ್ಕೆ ಮುರುಗೇಶ್ ದೂರು ನೀಡಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



