“ದಸರಾ ಉಪಸಮಿತಿ 2022ರ ವತಿಯಿಂದ ಯೋಗ ಸರಪಳಿ ಕಾಯ೯ಕ್ರಮ”

ಮೈಸೂರು: ದಸರಾ ಉಪಸಮಿತಿ 2022ರ ವತಿಯಿಂದ ಯೋಗ ಸರಪಳಿ ಕಾಯ೯ಕ್ರಮ.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ 5ನೇ ದಿನವಾದ ಶುಕ್ರವಾರ ದಸರಾ ಸಂಭ್ರಮ ರಂಗೇರಿದೆ. ಅರಮನೆ ಅವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಯೋಗ ದಸರಾ ಉಪಸಮಿತಿ 2022ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಸರಪಳಿ ಕಾಯ೯ಕ್ರಮ ನಡೆಯಿತು. ವಿವಿದ ಸಂಘ, ಸಂಸ್ಥೆಗಳು ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ, ಪ್ರದಶ೯ನ ನೀಡಿದರು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ ವಿದ್ಯೆ ಜೀವನಕ್ಕೆ ಎಷ್ಟು ಮುಖ್ಯವೋ,ಆರೋಗ್ಯಯುತವಾದ ಬದುಕಿಗೆ ಯೋಗ ತುಂಬಾ ಮುಖ್ಯವಾದದ್ದು ಎಂದರು. ಕಾಯ೯ಕ್ರಮದಲ್ಲಿ ಜಿ ಎಸ್‌ ಎಸ್‌ ಸಂಸ್ಥಪಕ ಶ್ರೀಹರಿ , ಜಿಲ್ಲಾ ಅಯುಷ್‌ ವೈದ್ಯಾಧಿಕಾರಿಗಳಾದ ಡಾ.ಪುಷ್ಪ, ಯೋಗ ದಸರಾ ಉಪಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ, ವಿರೂಪಾಕ್ಷ ಬೆಳವಾಡಿ, ಕೆ,ವೈ ಮಂಜು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವರದಿ : ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *