ಮೈಸೂರು: ದಸರಾ ಸಂಭ್ರಮ ಸ್ಥಬ್ಧಚಿತ್ರ ಭಿತ್ತಿಪತ್ರ ಬಿಡುಗಡೆ.

ಜಂಬೂಸವಾರಿಯ ಆಕರ್ಷಣೆಯಲ್ಲಿ ಸ್ಥಬ್ಧಚಿತ್ರಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.ಸ್ಥಳೀಯ ವೈಶಿಷ್ಟ್ಯತೆಯ ಸಂದೇಶ ಸಾರುವ ಸ್ಥಬ್ಧಚಿತ್ರಗಳು ಮೆರವೆಣಿಗೆಗೆ ಮೆರುಗು ನೀಡುತ್ತವೆ.ನಾಡ ಹಬ್ಬ ದಸರಾ 2022 ರ ಸ್ಥಬ್ದ ಚಿತ್ರ ಸಮಿತಿಯು ಇಂದು ಭಿತ್ತಿ ಪತ್ರ ಬಿಡುಗಡೆ ಮಾಡಿದೆ.
ಇಂದು ಜಿಲ್ಲಾ ಪಂಚಾಯತ್ ನ ದೇವರಾಜ ಅರಸು ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಭಿತ್ತಿಚಿತ್ರ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯದ 31 ಜಿಲ್ಲೆಯ ವಿಶಿಷ್ಟತೆಯ ಬಗ್ಗೆ ಉಪಸಮಿತಿಯ 3 ,ವಿವಿಧ ಇಲಾಖೆಯ ಗಳಿಂದ 9 ಸ್ಥಬ್ದ ಚಿತ್ರ ಸೇರಿದಂತೆ ಒಟ್ಟು 43 ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.
ಈ ಭಾರಿ ದಸರೆಯಲ್ಲಿ ಸಂಧರ್ಭದಲ್ಲಿ ಬರುವ ಲಕ್ಷಾಂತರ ಜನರಿಗೆ ತೃಪ್ತಿ ದಾಯಕ ರೀತಿಯ ಸ್ಥಬ್ದ ಚಿತ್ರ ಗಳನ್ನು ಈ ಭಾರಿ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸ್ತಬ್ಧಚಿತ್ರ ಉಪಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ
ಉಪಾಧ್ಯಕ್ಷ ಜೋಗಿಮಂಜು, ಪರುಶರಾಮಪ್ಪ,ಮಂಜುನಾಥ್,
ಉಪವಿಶೇಷಧಿಕಾರಿ ಧನುಷ್,ಕಾರ್ಯದ್ಯಕ್ಷರಾದ ಮೇಘಲಾ,ಮಾಲತಿ,ಸೌಮ್ಯ,ಸದಸ್ಯರಾದ ಮಹದೇವ ಸ್ವಾಮಿ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

