ಶಿವಮೊಗ್ಗ:ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿದ : ರಾಜು ತಲ್ಲೂರು.

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ಇವತ್ತು ರಾಜಿನಾಮೆ ನೀಡುತ್ತಿರುವುದಾಗಿ ಸೊರಬ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ರಾಜು ತಲ್ಲೂರು ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಸುಂದರೇಶ್ ಸಂಪೂಣ೯ ನಿಷ್ಕ್ರಿಯರಾಗಿದ್ದಾರೆ . ಜಿಲ್ಲೆಯಲ್ಲಿ ಅವರಿಂದ ಪಕ್ಷ ಚೇತರಿಕೆ ಕಾಣದು. ವ್ಯಕ್ತಿ ಪೂಜೆಯಲ್ಲಿ ಅವರು ನಿರತರಾಗಿದ್ದಾರೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸಿನಲ್ಲಿ ಒಗ್ಗಟ್ಟಿಲ್ಲ. ಈ ಬಗ್ಗೆ ರಾಜ್ಯದ ಮುಖಂಡರಿಗೆ ಮಾಹಿತಿ ನೀಡಿದ್ದೆ. ಕೆಲಸ ಮಾಡಲು ಮನಸ್ಸಿಲ್ಲದವರು ಪಕ್ಷದಲ್ಲಿದ್ದಾರೆ. ಇದರಿಂದ ನಿಷ್ಕ್ರಿಯ ಪಕ್ಷದಲ್ಲಿರಬಾರದೆಂದು ತೀಮಾ೯ನಿಸಿ ಕಾಂಗ್ರೆಸ್ ತ್ಯಜಿಸುತ್ತಿರುವುದಾಗಿ ವಿವರಿಸಿದರು.
ಮುಂದೆ ಯಾವ ಪಕ್ಷವನ್ನು ಸೇರಬೆಕೆಂದು ಇನ್ನೆರಡು ದಿನದಲ್ಲಿ ನಿಧ೯ರಿಸುತ್ತೇನೆ. ತನ್ನ ಬೆಂಬಲಿಗರೊಂದಿಗೆ ಈಗಾಗಲೆ ಕಾಂಗ್ರೆಸ್ ಬಿಡುವ ಬಗ್ಗೆ ಮಾತನಾಡಿದ್ದೇನೆ. ಬಿಜೆಪಿ ಸೇರುವ ಬಗ್ಗೆ ತೀಮಾ೯ನಿಸಲಾಗುವುದು ಎಂದರು .
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


