ಮೈಸೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಯಡಿಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರವರ ಮೇಲೆ ಎಫ್ ಐ ಆರ್.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಯಡಿಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರವರ ಮೇಲೆ ಎಫ್ ಐ ಆರ್ ದಾಖಲಾಗಿರುವ ಕಾರಣ ಸರ್ಕಾರ ಮೈಸೂರು ದಸರಾ ಕಾರ್ಯಕ್ರಮಗಳಿಂದ ಹೊರಗಿಡುವಂತೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ ಎಸ್ ಶಿವರಾಂ ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರವರು ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಮಲಿಂಗಂ ಕನ್ಸ್ ಟ್ರಕ್ಷನ್ ಕಂಪನಿಗೆ ಸೋಮಶೇಖರ್ ರವರು ತಮ್ಮ ಪ್ರಭಾವ ಬಳಸಿ 666.22 ಕೋಟಿ ರೂ ಮೊತ್ತದ ವಸತಿ ಸಮುಚ್ಚಾಯದ ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಿರುವ ಆರೋಪವಿದೆ.ಈ ಟೆಂಡರ್ ನಲ್ಲಿ ಅವ್ಯವಹಾರ ನಡೆದು ಲಂಚ ಪಡೆದಿರುವ ಸಂದರ್ಭ ಮಾಜಿ ಸಿಎಂ ಬಿಎಸ್ ವೈ ,ಎಸ್ ಟಿ ಎಸ್ ಹಾಗೂ ಇತರರ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.ಕಾನೂನು ಎಲ್ಲರಿಗೂ ಒಂದೇ. ಇಲ್ಲಿ
ಮಂತ್ರಿಗಳಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂಬಂತಾಗಿದೆ.
ಮೊನ್ನೆ ಸರ್ಕಾರಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.ಸರಕಾರಿ ಕಾರ್ಯಕ್ರಮ ಹೇಗೆ ಭಾಗವಹಿಸಿದ್ರು. ಜಿಲ್ಲಾಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೇಗೆ ಅವಕಾಶ ಕೊಟ್ರು. ಸೆ .26 ಕ್ಕೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ರವರು ಭಾಗವಹಿಸುವುದು ಎಷ್ಟು ಸರಿ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿಗೆ ಕಳಂಕ ಬರುವುದು ಬೇಡ.ಎಸ್ ಟಿ ಎಸ್ ರವರನ್ನು ಮೈಸೂರಿನಿಂದ ಗಡಿಪಾರು ಮಾಡಿ. ಕಾನೂನಿಗೆ ವಿರುದ್ದವಾಗಿ ಒಂದು ವೇಳೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಾಗಭೂಷಣ್,ಕಾಂಗ್ರೆಸ್ ಮುಖಂಡರಾದ ಲೋಕೇಶ್ ಮಾದಾಪುರ, ಮೈಸೂರು ಬಸವಣ್ಣ ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

