“ಒಂಟಿ ಇದ್ದ ಮಹಿಳೆ ಮನೆಯಲ್ಲಿ ದರೋಡೆ”

ನಂಜನಗೂಡು: ಒಂಟಿ ಇದ್ದ ಮಹಿಳೆ ಮನೆಯಲ್ಲಿ ದರೋಡೆ.

ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು.

ದಕ್ಷಿಣಕಾಶಿ ನಂಜನಗೂಡಿನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ.ಒಂಟಿಯಾಗಿದ್ದ
ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ಕಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನಂಜನಗೂಡಿನ ರಾಮಸ್ವಾಮಿ ಬಡಾವಣೆ ಒಂದನೇ ಬ್ಲಾಕ್ ನಲ್ಲಿ ಘಟನೆ ನಡೆದಿದೆ.
ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದು ಬಂದ ಖದೀಮರು ಕೃತ್ಯ ನಡೆಸಿದ್ದಾರೆ.
ಪಾರ್ಸಲ್ ಬಂದಿದೆ ಎಂದು ಬಾಗಿಲು ತೆಗೆಯಿಸಿ ಒಳ ನುಗ್ಗಿದ ಕಳ್ಳರು
ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕೃತ್ಯ ನಡೆಸಿದ್ದಾರೆ.

ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ ಕೈ ಬಳೆ ಉಂಗುರ
ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ ನೆಕ್ಲೆಸ್ ಹ್ಯಾಂಗಲ್ಸ್ ತಲೆಬೊಟ್ಟು ಸೇರಿ ಒಟ್ಟು 175 ಗ್ರಾಂ ಗೂ ಹೆಚ್ಚು ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ.
ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡ ಮಹಿಳೆ.ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ.ಕಳ್ಳರು
ಕನ್ನಡ ತಮಿಳು ಹಿಂದಿ ಮಾತನಾಡುತ್ತಿದ್ದರು.
ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *