ಕೆ.ಆರ್.ಪೇಟೆ : ಜಾಗಿನಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಚುನಾವಣೆ.

ನಮ್ಮ ಆಡಳಿತ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಬದ್ಧ.ನೂತನ ಅಧ್ಯಕ್ಷ ಉಪಾಧ್ಯಕ್ಷರಿಂದ ಅಭಿಮತ
ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಳ್ಳಿ ಹೋಬಳಿ ಜಾಗಿನಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಬೋರೇಗೌಡ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಕುಮಾರ್ ಜೆ ಎನ್ ಹೊರತುಪಡಿಸಿ ಉಳಿದ ಯಾವ ಸದಸ್ಯರೂ ಕೂಡ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿದರು
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಗೌರವಿಸುವ ಮೂಲಕ ಅಭಿನಂದಿಸಿ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ ರವರು ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಗ್ರಾಮದ ಸರ್ವಾನುಮತದಿಂದ ಅವಿರೋಧ ಆಯ್ಕೆಗೆ ಸಹಕರಿಸಿ ಎಂದು ಮನವರಿಕೆ ಮನಗೊಂಡು ಜಾಗಿನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಶ್ಲಾಘನೀಯ,ಅದೇ ರೀತಿ ಹೊಸದಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಸರ್ವ ಸದಸ್ಯರು ಸಂಘದಲ್ಲಿ ರಾಜಕೀಯ ಬೆರಸದೆ ಉತ್ತಮವಾಗಿ ತಮ್ಮ ಆಡಳಿತವನ್ನ ಸಂಘದ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಶ್ರಮಿಸಿ,ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಕುವ ಮೂಲಕ,ಸಂಘವನ್ನು ಆರ್ಥಿಕವಾಗಿ ಸದೃಢ ಗೊಳಿಸಬೇಕು,ಎಲ್ಲಾ ಸದಸ್ಯರು ಒಗ್ಗೂಡಿ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ನೂತನ ಆಡಳಿತ ಮಂಡಳಿಗೆ ಕಿವಿ ಮಾತು ತಿಳಿಸಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಬೋರೇಗೌಡ ನಮ್ಮ ನಾಯಕರಾದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲು ರವಿ ರವರ ನಿರ್ದೇಶನದಂತೆ ನೂತನವಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದೆನ್ನೆ,ನನ್ನ ಆಡಳಿತಾವಧಿಯಲ್ಲಿ ಪ್ರಾಮಾಣಿಕ ಸಂಘದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ನನ್ನ ಅಧ್ಯಕ್ಷರ ಸ್ಥಾನಕ್ಕೆ ಕಾರಣರಾದ ಊರಿನ ಮುಖಂಡರು ಹಾಗೂ ಸರ್ವ ಸದಸ್ಯರುಗಳ ಋಣವನ್ನು ಸಂಘದ ಅಭಿವೃದ್ಧಿಯ ಮಾಡುವ ಮುಖಾಂತರ ಋಣ ತೀರಿಸುತ್ತೇನೆ ಎಂದು ಹರ್ಷ ವಿಶ್ವಾಸ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಜಾಗಿನಕೆರೆ ಅಂಬರೀಶ್, ಸದಸ್ಯರುಗಳಾದ ಕೃಷ್ಣೇಗೌಡ, ಜವರೇಗೌಡ ಕೃಷ್ಣೇಗೌಡ ಜವರೇಗೌಡ ಜೆ ಬಿ, ಕಾಂತರಾಜು, ಗೌರಮ್ಮ, ಲತಾ,ಪುಟ್ಟಮ್ಮ, ಕಾರ್ಯದರ್ಶಿ ಅಶೋಕ್,ಜಾಗಿನಕೆರೆ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

