ಮೈಸೂರು: ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು ಹಣದ ಬೇಡಿಕೆ

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮನುಗನಹಳ್ಳಿ ಪಂಚಾಯತ್ ಪಿ,ಡಿ,ಓ ಯೋಗೇಂದ್ರರವರ ಲಂಚಾವತಾರದ ವೀಡಿಯೋ ವೈರಲ್……ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು ಹಣದ ಬೇಡಿಕೆ ಇಡುತ್ತಾರೆ, ಮನೆ ಜಿ.ಪಿ.ಎಸ್ ಮಾಡಲು ಫಲಾನುಭವಿಗಳ ಬಳಿ 1000 ರೂಗಳನ್ನು ಕೇಳುತ್ತಾರೆ.
ಲಂಚ ಲಂಚ ಲಂಚ….
ನಮ್ ದೇಶದಲ್ಲಿ ಒಂದು ಮಗು ಜನ್ಮ ಪಡೆದು ಬದುಕಿ ಬಾಳಿ ಸ್ಮಶಾನ ಸೇರೋವರೆಗೂ ಕೂಡಾ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ರೂ ಕೂಡಾ ಕೊಡ್ಲೇಬೇಕು ಇಲ್ಲಿ ಲಂಚ….
ಎಲ್ಲಿವರೆಗೂ ಲಂಚ ಕೊಡೋರ್ ಇರ್ತಾರೋ ಅಲ್ಲಿವರೆಗೂ ಲಂಚ ತಗೊಳೋರು ಇದ್ದೇ ಇರ್ತಾರೆ ಅಲ್ವಾ? ನಾನ್ ಯಾಕ್ ಇಲ್ಲಿ ಲಂಚದ ಬಗ್ಗೆ ಇಷ್ಟೊಂದು ಒತ್ತಿ ಹೇಳ್ತಿದ್ದೆನೆ ಅಂದ್ರೆ, ನಮಗೆ ಸರ್ಕಾರದ ಯಾವುದೇ ಕೆಲಸ ಬೇಗ ಆಗ್ಬೇಕು ಅಂದ್ರೆ ಅಧಿಕಾರಿಗಳ ಕೈ ಬಿಸಿ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಆ ವ್ಯವಸ್ಥೆಯೊಂದಿಗೆ ನಾವು ಕೂಡಾ ಹೊಂದಿಕೊಂಡು ಹೋಗುತ್ತಿದ್ದೇವೆ,,
ಇದೀಗ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅದೆಷ್ಟೋ ರೈತರ ಬೆಳೆ ಹಾನಿಯಾಗಿದೆ, ಒಂದಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ಒಂದಷ್ಟು ಜನ ಮನೆಮಠಗಳನ್ನು ಕಳೆದುಕೊಂಡು ವಾಸಮಾಡಲು ಸೂರಿಲ್ಲದೆ ಬೀದಿಗೆ ಬಿದ್ದಿದ್ದಾರೆ… ಇಂತಹ ನಿರಾಶ್ರಿತರ , ಬಡವರ, ರೈತರ , ಕೂಲಿ ಕಾರ್ಮಿಕರು, ಮನೆ ರಿಪೇರಿ ಮಾಡಿಸಿಕೊಂಡು, ಹೊಸಮನೆ ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಲಿ ಎಂದು ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಪರಿಹಾರವಾಗಿ ಘೋಷಣೆ ಮಾಡುತ್ತದೆ….. ದೇವ್ರು ವರ ಕೊಟ್ರು ಪೂಜಾರಿ ವರ ಕೊಡೋದಿಲ್ಲ ಅನ್ನೋದಕ್ಕೆ ಈ ಅಧಿಕಾರಿಯ ಮಾತುಗಳೇ ಸಾಕ್ಷಿ ನೋಡಿ ಸ್ನೇಹಿತರೇ…
ಈ ಮಳೆಯಿಂದಾಗಿ ಮನೆಕಳೆದುಕೊಂಡ ಗ್ರಾಮಸ್ಥರು ಮನೆ ನಿರ್ಮಾಣ/ರಿಪೇರಿ ಮಾಡಿಸಲು ಸರ್ಕಾರದ ಸವಲತ್ತು ಪಡೆಯಲು ವರದಿ ಮಾಡಿಕೊಡುವಂತೆ ಪಿಡಿಓ ಯೋಗೇಂದ್ರರನ್ನು ಸಂಪರ್ಕಿಸಿದ್ದಾರೆ, ಈ ಸಂದರ್ಭದಲ್ಲಿ ಈ ಲಂಚಬಾಕ ಪಿಡಿಓ ಪಾಪ ನಿರಾಶ್ರಿತರ ಬಳಿ , ಯಾವುದೇ ನಾಚಿಕೆ,ಮಾನ, ಮರ್ಯಾದೆ ಇಲ್ಲದೆ ಆಫೀಸಿನಲ್ಲಿ ಕುಳಿತೇ ಒಂದು ಮನೆಗೆ ಇಂತಿಷ್ಟು ಲಂಚ ಕೊಡ್ಲೇ ಬೇಕು, ಕೊಟ್ರೆ ಮಾತ್ರ, ನಿಮ್ ಫೈಲು ಮುಂದೆ ಹೋಗುತ್ತೆ, ಇಲ್ಲಾಂದ್ರೆ ಸರ್ಕಾರದ ಸೌಲಭ್ಯ ನಿಮಗೆ ದೊರೆಯೋದಿಲ್ಲ ಅಂತ ನೇರವಾಗಿಯೇ ಹೇಳುತ್ತಿದ್ದಾನೆ.. ಈತನ ಲಂಚಾವತಾರವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸರೆಹಿಡಿದಿದ್ದಾರೆ..
ಸರ್ಕಾರದಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಸಂಬಳ ಎಣಿಸುವ ಈ ಅಧಿಕಾರಿಗಳು ಅದು ಸಾಲದು ಎಂಬಂತೆ , ಈ ರೀತಿ ಬಡವರಿಂದ ಹಣವಸೂಲಿ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ವಾ??
ಇದೀಗ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದು, ಒಳ್ಳೆಯ ಅಧಿಕಾರಿಗಳನ್ನು ನೇಮಿಸಿ ನೊಂದವರಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

