“ಬಟ್ಟೆ ತೊಳೆಯಲು ಹೋಗಿ ತಲೆ ಸುತ್ತು ಬಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ”

ಮೈಸೂರು: ಬಟ್ಟೆ ತೊಳೆಯಲು ಹೋಗಿ ತಲೆ ಸುತ್ತು ಬಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಹಿಳೆಯೊಬ್ಬಳು ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ತಲೆ ಸುತ್ತು ಬಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ ನಾಯಕರ ಪತ್ನಿ ಜಯಮ್ಮ(61)ಎಂಬುವವರು ಮೃತಪಟ್ಟ ದುರ್ದೈವಿ ಘಟನೆಯ ವಿವರ:- ಗ್ರಾಮದ ಪಕ್ಕದಲ್ಲಿರುವ ಹಾರಂಗಿ ನಾಲೆಯ ಉಪಕಾಲುವೆಯಲ್ಲಿ ಗಣೇಶ ಹಬ್ಬದ ದಿನದಂದು ಬಟ್ಟೆ ತೊಳೆಯಲು ಹೋಗಿ ತಲೆಸುತ್ತಿನಿಂದ ನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ.
ದಾರಿಹೋಕರು ನಾಲೆಯ ಬಳಿ ಬರೀ ಬಟ್ಟೆ ಕಾಣುತ್ತಿದ್ದನ್ನು ಕಂಡ ಯಾರು ಇಲ್ಲದ ಕಾರಣ ಪಕ್ಕಕ್ಕೆ ಹೋಗಿ ನೋಡಿದಾಗ ಮಹಿಳೆ ನೀರಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಅವರ ಕುಟುಂಬಕ್ಕೆ ತಿಳಿಸಿದರು ತಕ್ಷಣ ದಾವಿಸಿದ ಕುಟುಂಬಸ್ಥರು ಮಹಿಳೆಯ ಮೃತವನ್ನು ಮೇಲೆತ್ತಿ ಕುಟುಂಬದ ಮನೆಯ ಹತ್ತಿರ ಇಡಲಾಯಿತು.
ಕುಟುಂಬಸ್ಥರ ಆಕ್ರದನ :- ಹಬ್ಬಕ್ಕೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮಸ್ಥರು ಸುದ್ದಿ ಕೇಳಿದ ತಕ್ಷಣ ಸ್ಥಳಕ್ಕೆ ಓಡೋಡಿ ಬಂದ ಜನರು ಪ್ರತಿಯೊಬ್ಬರಲ್ಲೂ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.


Leave a Reply

Your email address will not be published. Required fields are marked *