ಮೈಸೂರು: ಮಳೆಯ ಅನಾಹುತದಿಂದ ಮನೆಗಳಿಗೆ ಹಾನಿ ಶಾಸಕ ಜಿ.ಟಿ.ಡಿ. ಪರಿಶೀಲನೆ.

ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡುವಂತೆ ಶಾಸಕ ಜಿ.ಟಿ.ಡಿ. ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಮೈಸೂರು ತಾಲ್ಲೂಕು ಡಿ.ಸಾಲುಂಡಿ ಗ್ರಾಮದಲ್ಲಿ ೧೪ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗ ತಿಳಿಸಿದರು.
ಮಳೆಯಿಂದಾಗಿ ಕ್ಷೇತ್ರದಲ್ಲಿ ಕೆರೆಗಳು ಕೋಡಿ ಬಿದ್ದು, ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ನಿಕರವಾದ ಮಾಹಿತಿಯನ್ನು ಪಡೆದು, ಬೆಳೆ ಪರಿಹಾರ ನೀಡುವ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಮನೆಗಳಿಗೆ ನೀರು ನುಗ್ಗಿ ಆಗಿರುವ ನಷ್ಟಕ್ಕೆ ಪರಿಹಾರವನ್ನು ಕೂಡಲೇ ನೀಡುವಂತೆ ಸೂಚಿಸಿದರು.
ಗ್ರಾಮಗಳಲ್ಲಿ ನೀರಿನ ಹಳ್ಳಗಳು, ಕಾಲುವೆಗಳು ಮುಚ್ಚಿಹೋಗಿದ್ದು, ಕಾಲುವೆಗಳಲ್ಲಿ ಮತ್ತು ಹಳ್ಳಗಳಲ್ಲಿ ಸರಾಗವಾಗಿ ನೀರು ಹರಿಯಲು ಕ್ರಮ ವಹಿಸುವಂತೆ ಸೂಚಿಸಿದರು.
ಡಿ.ಸಾಲುಂಡಿ ಗ್ರಾಮದಲ್ಲಿ ಮಹೇವಮ್ಮ ಕೋಂ ಲೇಟ್ ಬಸವನಾಯಕ, ಬಸವಲಿಂಗನಾಯಕ ಬಿನ್ ಲೇಟ್ ಉರಗನಾಯಕ, ಚಿಕ್ಕನಾಯಕ ಬಿನ್ ಕುಳ್ಳನಾಯಕ, ಚಿಕ್ಕನಾಯಕ ಬಿನ್ ಮರಿನಾಯಕ, ರೇಣುಕಾ ಕೋಂ ಮಲ್ಲಿಕಾರ್ಜುನ, ಚಿಕ್ಕಶೆಟ್ಟಿ ಬಿನ್ ಪಿರಶೆಟ್ಟಿ, ದೊಡ್ಡೇಗೌಡ ಬಿನ್ ದಾಸೇಗೌಡ, ಪಾರ್ವತಿ ಕೋಂ ಶಿವಣ್ಣ, ಬಸಪ್ಪ ಬಿನ್ ಬಣ್ಣೇಗೌಡ, ಜವರೇಗೌಡ ಬಿನ್ ಮರಿಬೇಗೌಡ, ಬಸಪ್ಪ ಬಿನ್ ಮರಿಬಸವನಾಯಕ, ನಿಂಗೇಗೌಡ ಬಿನ್ ಬವಳಿಗೌಡ, ಶಂಭುಲಿAಗನಾಯಕ ಬಿನ್ ಲೇಟ್ ಚಿಕ್ಕತಮ್ಮನಾಯಕ, ಕಾಳಮ್ಮ ಕೋಂ ಲೇಟ್ ಗೋಪಾಲಯ್ಯರವರ ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಖಂಡರಾದ ಕೋಟೆಹುಂಡಿ ಮಹದೇವು, ತಾ.ಪಂ. ಇ.ಓ. ಗಿರೀಶ್, ಉಪತಹಶೀಲ್ದಾರ್ ಮಂಜು, ಎ.ಇ.ಇ. ಮಮತಾ, ಆರ್.ಐ. ಲೋಹಿತ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

