“ಹೆಣ್ಣು ಮಕ್ಕಳು ಅತ್ಯಂತ ಜಾಗರೂಕತೆಯಿಂದ ವಿದ್ಯಾರ್ಥಿ ಜೀವನವನ್ನು ಪೂರ್ಣಗೊಳಿಸಿ”: ಲೇಖಕರು ಮತ್ತು ಪ್ರಾದ್ಯಾಪಕರಾದ ಡಾನ್ಸ್.ಪಿ.ಚಂದ್ರಶೇಖರ್

ಟಿ.ನರಸೀಪುರ: ಹೆಣ್ಣು ಮಕ್ಕಳು ಅತ್ಯಂತ ಜಾಗರೂಕತೆಯಿಂದ ವಿದ್ಯಾರ್ಥಿ ಜೀವನವನ್ನು ಪೂರ್ಣಗೊಳಿಸಿ,ಉನ್ನತ ಹುದ್ದೆ ಪಡೆದು ತಂದೆ,ತಾಯಿಗೆ ಆಸರೆಯಾಗಿ ನಿಲ್ಲಬೇಕೆಂದು ಲೇಖಕರು ಮತ್ತು ಪ್ರಾದ್ಯಾಪಕರಾದ ಡಾನ್ಸ್.ಪಿ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈರಾಪುರ ದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ
ಮೊಬೈಲ್ ಬಳಕೆ ಅತ್ಯಂತ ಕಳವಳಕಾರಿಯಾಗಿದೆ .ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ.ಒಳ್ಳೆಯ ವಿಷಯಗಳ ಬಗ್ಗೆ ತಿಳಿಯಲು ಮತ್ತು ಮನನ ಮಾಡಿಕೊಳ್ಳಲು ಮಾತ್ರ ಉಪಯೋಗವಾಗಬೇಕು.

ಆದರೆ ಏನಾಗುತ್ತಿದೆ ಎಂಬ ಆತಂಕದ ನುಡಿಗಳನ್ನಾಡಿ ಕಳವಳ ವ್ಯಕ್ತಪಡಿಸಿದರು.ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ಪ್ರಿಯ ತನ್ನ ಕೈಚಳಕದಿಂದ ಅದ್ಬುತ ಕಲಾಕೃತಿಯನ್ನು ಕಾಲೇಜಿನ ಕೊಠಡಿಯೊಂದರಲ್ಲಿ ಸಂಪೂರ್ಣವಾಗಿ ಬಳಸಿಕೊಂಡುಚಿತ್ರ ಬಿಡಿಸಿದ್ದು ನೋಡುಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯಿತು.ಆ ಕೊಠಡಿಯ ಉದ್ಘಾಟನೆಯನ್ನು ಮುಖ್ಯ ಅತಿಥಿಗಳು ನೆರವೇರಿಸಿಗರು.

ಕಾರ್ಯಕ್ರಮದಲ್ಲಿ ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿದ್ಯಾರ್ಥಿನಿಯರು ನಡೆಸಿಕೊಟ್ಟರು.ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಗೆದ್ದಂತಹ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ವಿ.ಜಗದೀಶ್ , ಸ್ಕೌಟ್ ಮತ್ತು ಗೈಡ್ಸ್ ನ ರಾಮಪ್ರಸಾದ್,ಅಬ್ದುಲ್ ಜಮೀಲ್,ಸುರೇಶ್ ಕುಮಾರ್ ಸೇರಿದಂತೆ ಕಾಲೇಜಿನ ಅದ್ಯಾಪಕ ವೃಂದ ಹಾಜರಿದ್ದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *