ದ್ವಿಚಕ್ರ ವಾಹನದಲ್ಲಿ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಲ್.ನಾಗೇಂದ್ರ

ಮೈಸೂರು:ದ್ವಿಚಕ್ರ ವಾಹನದಲ್ಲಿ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಲ್.ನಾಗೇಂದ್ರ.

ಶಾಸಕ ಎಲ್.ನಾಗೇಂದ್ರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಜಯನಗರ ಬಡಾವಣೆಯ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಲು ದ್ವಿಚಕ್ರ ವಾಹನದಲ್ಲಿ ತೆರಳಿದರು.

ವಿಜಯನಗರ ಯೋಗಾನರಸಿಂಹ ದೇವಸ್ಥಾನದ ಬಳಿಯಿರುವ ಗಾಯತ್ರಿ ಭವನ್ ಹೋಟೆಲ್ ಬಳಿಯಿಂದ
ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಸಂಭಂದಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಕ್ತ ನಿರ್ದೇಶನ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಿದರು.

  1. ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿರುವ ಪಾದಚಾರಿ ಮಾರ್ಗ ಹಾಗೂ ಪುಟ್ ಪಾತ್ ತೀವ್ರ ಹಾಳಾಗಿದ್ದು ಮಳೆಯ ನೀರು ತುಂಬಿಕೊಂಡು ಜನ ಓಡಾಡಲು ತೊಂದರೆಯಾಗುವುದಾಗಿ ಮನವಿ ಮಾಡಲಾಗಿತ್ತು, ಈ ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಈ ರಸ್ತೆಯ ಪಾದಚಾರಿ ಮಾರ್ಗಕ್ಕೆ ಟೈಲ್ಸ್ ಅಳವಡಿಸಿ ಮಳೆಯ ನೀರು ನಿಲ್ಲದಂತೆ ಚರಂಡಿ ನಿರ್ಮಾಣ ಮಾಡಲು ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.
  2. ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ಅಲವಾಡಿಸುತ್ತಿರುವ ಗ್ಯಾಸ್ ಪೈಪ್ ಲೈನ್ ಕಾಮಗಾರಿಯನ್ನು ವೀಕ್ಷಣೆ ಮಾಡಿ, ಶಿಗ್ರವಾಗಿ ಕಾಮಗಾರಿ ಪೂರ್ಣಗೊಳಿಸಿ, ಗುಂಡಿಯನ್ನು ಮುಚ್ಚಿ ರಸ್ತೆ ಅಭಿವೃದ್ದಿಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.
  3. ಸ್ನೇಕ್ ಶ್ಯಾಮ್ ರಸ್ತೆಯಲ್ಲಿ ಮಳೆಯ ನೀರು ತುಂಬಿಕೊಂಡು ಮನೆಗಳಿಗೆ ನುಗ್ಗುತ್ತಿದ್ದು ಸಮಸ್ಯೆ ಪರಿಹರಿಸಲು ಕೋರಿದಾಗ, ಮಹಾನಗರ ಪಾಲಿಕೆ ಇಂಜಿನಿಯರ್ ರವರಿಗೆ ಸೂಚನೆ ನೀಡಿ, ಶೀಗ್ರವಾಗಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ನಿಲ್ಲದಂತೆ ಕ್ರಮವಹಿಸಲು ಹಾಗೂ ಮೇಲೆ ನೀರು ಚರಂಡಿಯನ್ನು ಸ್ವಚ್ಚಗೊಳಿಸಿ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
  4. 1ನೆ ಹಂತದ 3ಕ್ರಾಸ್ ಗಳಲ್ಲಿ ಹುಸದಾಗಿ ಒಳಚರಂಡಿ ಕಾಮಗಾರಿಯನ್ನು ಕೂಡಲೇ ಕೈಗೊಳ್ಳುವಂತೆ ಸೂಚಿಸಿದರು.
  5. ಈ ಮೂರು ರಸ್ತೆಗಳಿಗೆ ಒಳ ಚರಂಡಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ ಮಾಡುವಂತೆ PWD ಅಧಿಕಾರಿಗಳಿಗೆ ಸೂಚಿಸಿದರು.
  6. ಕೆಲವು ಕಡೆ ಅತ್ಯಂತ ಹಳೆಯದಾದ ಮರಗಳಿದ್ದು ಈ ಮರಗಳ ಕೊಂಬೆಗಳನ್ನು ಕಡಿದು ಸಾರ್ವಜನಿಕ ಸುಗಮ ಓಡಾಟಕ್ಕೆ ಕ್ರಮ ವಹಿಸಲು ಸೂಚಿಸಿದರು.
  7. ವಿಜಯನಗರ ಪೊಲೀಸ್ ಠಾಣೆ ಮುಂಬಾಗದಲ್ಲಿ ಇರುವ ಉದ್ಯಾನವನ್ನು ಶಾಸಕರು ನೀಡಿದ್ದ 45 ಲಕ್ಷದ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿದರು, ತದನಂತರ ಕೆಲವು ಮಾರ್ಪಾಡುಗಳನ್ನು ಮಾಡಲು ಸೂಚಿಸಿ, ದನ ಕರು ಒಳಗೆ ಪ್ರವೇಶಿಸದಂತೆ Cow ಗೇಟ್ ನಿರ್ಮಾಣ ಮಾಡಲು ಸೂಚಿಸಿದರು.
  8. 21 ನೇ ಕ್ರಾಸ್ ನಲ್ಲಿ ಒಳಚರಂಡಿ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಿದರು.
  9. ಸ್ಥಳೀಯ ಸಾರ್ವಜನಿಕರು KSRTC city ಬಸ್ ಸಂಚಾರ ವಿರಳವಾಗಿರುವ ಕುರಿತು ಮನವಿ ಮಾಡಲಾಗಿ ಸ್ಥಳದಲ್ಲಿ ಹಾಜರಿದ್ದ KSTRC ಅಧಿಕಾರಿಗಳಿಗೆ ಸೂಚನೆ ನೀಡಿ ಈಗಾಗಲೇ ಈ ಕುರಿತಂತೆ ನಾನು ಪತ್ರ ಬರೆಯಲಾಗಿದ್ದು ಈ ಸಮಸ್ಯೆಯನ್ನು ಒಂದು ವಾರದೊಳಗಾಗಿ ನಿಯಮಿತ ಬಸ್ ಸಂಚಾರಕ್ಕೆ ಕ್ರಮ ವಹಿಸಲು ಸೂಚಿಸಿದರು.
  10. ರಿಂಗ್ ರಸ್ತೆಯಲ್ಲಿ ಸಂಜೆ 7.00ಗಂಟೆ ನಂತರ ಮಹಿಳೆಯರು ತಿರುಗಾಡಲು ಭಯದ ವಾತಾವರಣ ಇದ್ದು ಈ ಕುರಿತಂತೆ ಕ್ರಮವಹಿಸಲು ಕೋರಿದಾಗ, ಹಾಜರಿದ್ದ ವಿಜಯನಗರ ಹಾಗೂ ಹೆಬ್ಬಾಳು ಪೊಲೀಸ್ ಠಾಣೆ ಅಧಿಕಾರಿಗಳಿಗೆ ಈ ಸಮಯದಲ್ಲಿ ಗಸ್ತು ತಿರುಗುವ ಕ್ರಮ ವಹಿಸುವಂತೆ ಸೂಚಿಸಿದರು.
  11. ಅಂತಿಮವಾಗಿ ಹಂಪಿ ವೃತ್ತದ ಪಾರ್ಕ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಪ್ರತಿಯೊಬ್ಬ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಸುವಂತೆ ಮನವಿ ಮಾಡಿದರು.
  12. ಶಾಸಕರು ಅವರ ಅವಧಿಯಲ್ಲಿ ವಾರ್ಡ್ sam-20 ಕ್ಕೆ ಆವರ ಅವಧಿಯಲ್ಲಿ ಕಳೆದ 3 ವರ್ಷದಲ್ಲಿ ವಿವಿಧ ಅಭಿವೃದ್ಧಿ ಕಾಮಗರಿಗಳಿಗೆ ಒಟ್ಟು ರೂ.30.50ಕೋಟಿ ಅನುದಾನ ನೀಡಿದ್ದು ಕೆಲವು ಕಾಮಗಾರಿಗಳು ಮುಕ್ತಾಯವಾಗಿದ್ದು ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿರುವ ಕುರಿತಂತೆ ವಿವರವನ್ನು ನೀಡಿದರು.

ಈ ಎಲ್ಲಾ ಕಾರ್ಯಕ್ರಮಗಳ ನಂತರ ವಾರ್ಡ್ ಯಾತ್ರೆಯನ್ನು ಪೂರ್ಣಗೊಳಿಸಿ ನಿರ್ಗಮಿಸಿದರು.

ಈ ವಾರ್ಡ್ ಯಾತ್ರೆ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಚಾಮರಾಜ ಉಪಾಧ್ಯಕ್ಷ ಸತೀಶ್ ಗೌಡ, ಪ್ರಧಾನ ಕಾರ್ಯದರ್ಶಿ ರಮೇಶ್, ಪುನೀತ್, ವಾರ್ಡ್ ಅಧ್ಯಕ್ಷರಾದ ವಸಂತ ಕುಮಾರ್, ದಶರಥ, ಅವಿನಾಶ್, ಪ್ರಭು,ಸೋಮಶೇಖರ್, ಕಿಶೋರ್, ಅನುಪಮ, ಶುಭಮಣಿ, ಮಂಜುಳಾ, ಭಾ.ಜ.ಪ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ವರದಿ : ನಂದಿನಿ ಮೈಸೂರು

Leave a Reply

Your email address will not be published. Required fields are marked *