
ಮೈಸೂರು: ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಕಡತಗಳ ಪರಿಶೀಲನೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ಭೇಟಿ ಮುಡಾ ಗೆ ಭೇಟಿ ನೀಡಿದೆ.ಮುರಳೀಧರ್ ನೇತೃತ್ವದ ಮೂವರನ್ನೊಳಗೊಂಡ ತಂಡ ಭೇಟಿ ನೀಡಿದೆ.ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನಲೆ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಸಲ್ಲಿಸಿದ ದೂರಿನ ಕಾರಣ ಕಡತಗಳ ಪರಿಶೀಲನೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು.ಆಗಸ್ಟ್ 17 ರಂದು ಮುರಳೀಧರ್ ನೇತೃತ್ವದ ಸಮಿತಿ ಮುಡಾಗೆ ಭೇಟಿ ನೀಡಿ ಕಡತಗಳನ್ನ ಪರಿಶೀಲನೆ ಮಾಡಿತು.ಆಯುಕ್ತರಾದ ದಿನೇಶ್ ಕುಮಾರ್,ನಗರ ಯೋಜನಾ ಸದಸ್ಯರಾದ ಶೇಷ ರವರು ಕಡತಗಳನ್ನ ಹಾಜರು ಪಡಿಸಿದ್ದರು.ಕಡತಗಳನ್ನ ಪರಿಶೀಲನೆ ಮಾಡಿರುವ ಸಮಿತಿ 15 ದಿನಗಳ ಒಳಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ವರದಿ ಸಲ್ಲಿಸಲಿದೆ.
ವರದಿ : ನಂದಿನಿ ಮೈಸೂರು



