ಸಪ್ತಪದಿ ತುಳಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ

ಬೆಂಗಳೂರು: ಸಪ್ತಪದಿ ತುಳಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ.

ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಇಂದು ಅದ್ದೂರಿಯಾಗಿ ನಡೆಯಿತು.

ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆಯ ವೈಟ್ ಪಟೆಲ್ ನ ತ್ರಿಪುರ ವಾಸಿನಿಯಲ್ಲಿ ಮನೋರಂಜನ್ ಅವರ ವಿವಾಹ ಶಾಸ್ತ್ರೋಕ್ತವಾಗಿ ನಡೆಯಿತು.

ಇಂದು ಬೆಳಿಗ್ಗೆ 8.30 ಗಂಟೆಯ ಶುಭ ಸಮಯದಲ್ಲಿ ಮನೋರಂಜನ್ ಅವರು ಸಂಗೀತ ಅವರಿಗೆ ಮಾಂಗಲ್ಯ ಧಾರಣೆ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

‘ಮುಗಿಲು ಪೇಟೆ’ಯಲ್ಲಿ ಮಿಂಚಿದ ‘ಸಾಹೇಬ’ ಮನೋರಂಜನ್ ರವಿಚಂದ್ರನ್ ಅವರ ಹಿರಿಯ ಪುತ್ರ

“ನಮ್ಮ ತಂದೆ- ತಾಯಿ ತೋರಿಸಿದ ಹುಡುಗಿಯನ್ನೆ ಮದುವೆ ಆಗಿದ್ದೇನೆ. ಸಂಗೀತ ನಮ್ಮ ದೂರದ ಸಂಬಂಧಿ. ಈಗ ನನಗೆ 34 ವರ್ಷ, ಆದರೆ ನಮ್ಮ ಕುಟುಂಬದಲ್ಲಿ 27 ವರ್ಷಕ್ಕೆ ಮದುವೆ ಆಗುತ್ತಾರೆ. ನಾನು ಸ್ವಲ್ಪ ಲೇಟಾಗಿ ಮದುವೆ ಆಗಿದ್ದೇನೆ” ಎಂದು ಮನೋರಂಜನ್ ಹೇಳಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಖಷ್ಬೂ, ಉಮಾಶ್ರೀ, ಶರಣ್ ಸೇರಿದಂತೆ ಸಿ‌ನಿ ರಂಗದ ಹಲವು ಗಣ್ಯರು ನೂತನ ವಧುವರರಿಗೆ ಶುಭ ಹಾರೈಸಿದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *