ಶಿವಮೊಗ್ಗ: ಗುರುವಾರದ ವರೆಗೆ ಸೆಕ್ಷನ್ 144 ಜಾರಿ.

ಇಂದು ಬೆಳಗ್ಗಿನ ಜಾವ ಬೆಳಿಗ್ಗೆ 2-30 ನಡೆದ ಜುಬಿ ಯಾನೆ ಚರ್ಬಿಗೆ ಹೊಡೆದ ಗುಂಡೇಟು ನಡೆದಿದೆ. ಗುಂಡೇಟು ಹೊಡೆಯುವ ಮುಂಚೆ ಜಬಿ ಪೊಲೀಸರ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ವಿನೋಬ ನಗರ ಪಿಎಸ್ಐ ಮಂಜುನಾಥ್ ಕುರಿ ಅವರಿಗೂ ಗಾಯಗಳಾಗಿವೆ. ಅವರನ್ನೂ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗಿನ ಜಾವ ನಡೆದಗುಂಡೇಟು ಫಲಕ್ ಪ್ಯಾಲೇಸ್ ಬಳಿ ಜುಬಿ ಇದ್ದಾನೆ ಎಂಬ ಮಾಹಿತಿ ಹಿನ್ನಲೆಯಲ್ಲಿ ವಿನೋಬ ನಗರ ಪಿಎಸ್ಐ ಮಂಜುನಾಥ್ ಕುರಿ ತೆರಳಿದ್ದರು. ಬಂಧಿಸುವ ವೇಳೆ ಆರೋಪಿ ಜುಬಿ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದನು. ಈ ಹಿನ್ನಲೆಯಲ್ಲಿ ಪಿಎಸ್ಐ ಆತ್ಮರಕ್ಷಣೆಗಾಗಿ ಗುಂಡೇಟು ಹೊಡೆದಿದ್ದಾರೆ, ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ದಾಳಿಯಲ್ಲಿ ವಿನೋಬ ನಗರ ಪಿಎಸ್ ಐ ಮಂಜುನಾಥ್ ಕುರಿಗೂ ಗಾಯಗಳಾಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ
ಮೇಲಿಂದ ಮೇಲೆ ಶಿವಮೊಗ್ಗದಲ್ಲಿ ನಡೆಯುವ ಈ ಕೃತ್ಯ ಒಳ್ಳೆಯ ಬೆಳವಣಿಗೆ ಅಲ್ಲ. ಶಿವಮೊಗ್ಗ ಸಾಂಸ್ಕೃತಿಕ ನಗರವಿದೆ. ಪದೇ ಪದೇ ದೊಂಬಿ ಗಲಾಟೆಗಳು ನಡೆಯೋದು ಸರಿಯಲ್ಲ. ಪ್ರತಿಷ್ಠೆಯಾಗಿ ಯಾರೂ ತಗೆದುಕೊಳ್ಳಬಾರದು. ಪೊಲೀಸರೊಂದಿಗೆ ಕೈಜೋಡಿಸುವಂತೆ ಎಡಿಜಿಪಿ ಕೋರಿದ್ದಾರೆ.
ಗಣಪತಿ ಹಬ್ಬ ಸಹ ಮುಂದಿನ ದಿನಗಳಲ್ಲಿ ಬರುತ್ತಿದ್ದು ,ಯಾರೂ ಗಲಾಟೆ ಮತ್ತು ದೊಂಬಿ ನಡೆಸದಂತೆ ಮನವಿ ಮಾಡಿಕೊಂಡರು.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555



