ಶಿವಮೊಗ್ಗದಲ್ಲಿ ಸಿ.ಎಲ್–2 ಲೈಸೆನ್ಸ್ ಉಲ್ಲಂಘನೆ ಆರೋಪ: ರವಿ ವೈನ್ಸ್ ವಿರುದ್ಧ ಸಾರ್ವಜನಿಕರ ದೂರು

ಹಿಂದ್ ಸಮಾಚಾರ ನ್ಯೂಸ್ ಡೆಸ್ಕ್ | ಶಿವಮೊಗ್ಗ

ಶಿವಮೊಗ್ಗ: ಶಿವಮೊಗ್ಗದಲ್ಲಿ ಇರುವ ರವಿ ವೈನ್ಸ್ ಮತ್ತು ಚೆನ್ನಾಂಬಿಕಾ ವೈನ್ಸ್ ಕುರಿತು ಸಾರ್ವಜನಿಕರಿಂದ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಎರಡೂ ವೈನ್ ಶಾಪುಗಳು ಸಿ.ಎಲ್–2 ಲೈಸೆನ್ಸ್ ಹೊಂದಿದ್ದು, ನಿಯಮಾನುಸಾರ ಮದ್ಯವನ್ನು ಪಾರ್ಸೆಲ್ ರೂಪದಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶವಿದೆ.

ಸ್ಥಳದಲ್ಲೇ ಕುಳಿತು ಮದ್ಯ ಸೇವನೆ ಮಾಡಲು ಅನುಮತಿ ಇರುವುದಿಲ್ಲ.
ಸಾರ್ವಜನಿಕರ ಮಾಹಿತಿ ಪ್ರಕಾರ ಚೆನ್ನಾಂಬಿಕಾ ವೈನ್ಸ್ ನಲ್ಲಿ ಹೊರಗಡೆ ಕುಡಿಯುವ ವ್ಯವಸ್ಥೆ ಮಾಡಲಾಗಿಲ್ಲ. ಆದರೆ ರವಿ ವೈನ್ಸ್ ಬಳಿ ಇರುವ ಜಾಗವನ್ನು ಲೀಜ್ ಆಧಾರದ ಮೇಲೆ ಒಂದು ಹೋಟೆಲ್‌ಗೆ ತಿಂಗಳಿಗೆ ಸುಮಾರು ₹30,000 ಬಾಡಿಗೆಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆ ಜಾಗದಲ್ಲಿ ಮದ್ಯವನ್ನು ಕುಳಿತು ಸೇವನೆ ಮಾಡುವ ವ್ಯವಸ್ಥೆ ಇರುವುದರಿಂದ ಇದು ಬಾರ್ ಮಾದರಿಯ ವ್ಯವಹಾರವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಿ.ಎಲ್–2 ಲೈಸೆನ್ಸ್ ಹೊಂದಿರುವ ವೈನ್ ಶಾಪುಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದ್ದು, ಕುಳಿತು ಮದ್ಯ ಸೇವನೆ ಮಾಡಲು ಬಾರ್ ಲೈಸೆನ್ಸ್ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಎಕ್ಸೈಸ್ ಇಲಾಖೆ ಮತ್ತು ಪೊಲೀಸ್ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕರ ಪರವಾಗಿ ಈ ದೂರನ್ನು ಹಿಂದ್ ಸಮಾಚಾರ ನ್ಯೂಸ್ ಮೂಲಕ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

Leave a Reply

Your email address will not be published. Required fields are marked *