ದೂರಸಂಪರ್ಕ ಸಹಕಾರಕ್ಕೆ ಭಾರತ–ಜರ್ಮನಿ ಸಂಯುಕ್ತ ಘೋಷಣೆಗೆ ಸಹಿ

ದೂರಸಂಪರ್ಕ ಸಹಕಾರಕ್ಕೆ ಭಾರತ–ಜರ್ಮನಿ ಸಂಯುಕ್ತ ಘೋಷಣೆಗೆ ಸಹಿ

ಭಾರತ ಮತ್ತು ಜರ್ಮನಿ ದೂರಸಂಪರ್ಕ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಸಂಯುಕ್ತ ಉದ್ದೇಶ ಘೋಷಣೆ (Joint Declaration of Intent)ಗೆ ಸಹಿ ಹಾಕಿವೆ.
ದೂರಸಂಪರ್ಕ ಸಚಿವಾಲಯ ತಿಳಿಸಿದಂತೆ, ಎರಡೂ ರಾಷ್ಟ್ರಗಳು ಮಾಹಿತಿ ಮತ್ತು ಉತ್ತಮ ಕಾರ್ಯಪದ್ದತಿಗಳ ನಿಯಮಿತ ವಿನಿಮಯ, ಹೊಸ ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ಸಹಕಾರ, ಹಾಗು ನೀತಿ ಮತ್ತು ನಿಯಂತ್ರಣ ಚೌಕಟ್ಟು, ಉತ್ಪಾದನೆ ಮತ್ತು ವ್ಯಾಪಾರ ಸುಗಮತೆ ವಿಷಯಗಳಲ್ಲಿ ಸಂಯುಕ್ತ ಪ್ರಯತ್ನಗಳಿಗೆ ಒಪ್ಪಿಗೆ ನೀಡಿವೆ.
ಈ ಘೋಷಣೆಗೆ ಜರ್ಮನಿಯ ಫೆಡರಲ್ ಚಾನ್ಸೆಲರ್ ಫ್ರೈಡ್ರಿಕ್ ಮರ್ಝ್ ಅವರು ಈ ತಿಂಗಳ 12 ಮತ್ತು 13 ರಂದು ಭಾರತಕ್ಕೆ ನೀಡಿದ ಅಧಿಕೃತ ಭೇಟಿ ಸಂದರ್ಭದಲ್ಲಿ ಸಹಿ ಮಾಡಲಾಯಿತು.

ಈ ಸಹಕಾರವು ಒಳಗೊಂಡ ಮತ್ತು ಸ್ಥಿರ ಡಿಜಿಟಲ್ ಪರಿವರ್ತನೆಗೆ ಉಭಯ ರಾಷ್ಟ್ರಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತ–ಜರ್ಮನಿ ಸಂಬಂಧಗಳಲ್ಲಿ ದೂರಸಂಪರ್ಕ ಮತ್ತು ICT ಕ್ಷೇತ್ರಗಳಲ್ಲಿ ಇನ್ನಷ್ಟು ಆಳವಾದ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ.

Leave a Reply

Your email address will not be published. Required fields are marked *