ಉದ್ಯಾನವನದ ಸ್ವಚ್ಛತೆಗೆ ಇಳಿದ ಮಾಜಿ ಪುರಪಿತೃ .ವಿ.ರಾಮಪ್ರಸಾದ
ಮಾಜಿ ಆದರೂ ವಿಶ್ರಾಂತಿ ಇಲ್ಲ…ಸಾಮಾಜಿಕ ಕಳಕಳಿ ಮರೆಯಲ್ಲ…ಉದ್ಯಾನವನದ ಸ್ವಚ್ಛತೆಗೆ ಇಳಿದ ಮಾಜಿ ಪುರಪಿತೃ ಮ.ವಿ.ರಾಮಪ್ರಸಾದ…
ಮೈಸೂರು ನಗರ ಪಾಲಿಕೆಯ ಸದಸ್ಯರ ಅವಧಿ ಮುಗಿದಿದೆ. 65 ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಂಡಿದ್ದಾರೆ.ಅವಧಿ ಮುಗಿದರೂ ವಿಶ್ರಾಂತಿ ಪಡೆಯದ ವಾರ್ಡ್ 55 ರ ಮಾಜಿ ಕಾರ್ಪೊರೇಟರ್ ಸಾಮಾಜಿಕ ಕಳಕಳಿಗೆ ಆಧ್ಯತೆ ನೀಡುತ್ತಿದ್ದಾರೆ. ತಾವು ಪ್ರತಿನಿಧಿಸಿದ್ದ ವಾರ್ಡ್ ನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿ ಮುಂದುವರೆಯುತ್ತಿದ್ದಾರೆ. ರೆಸ್ಟ್ ಗೆ ಮೊರೆ ಹೋಗದ ಮ.ವಿ.ರಾಮಪ್ರಸಾದ ಅಕ್ಕಮ್ಮಣ್ಣಿ ಆಸ್ಪತ್ರೆಯ ಉದ್ಯಾನವನದ ಸ್ವಚ್ಛತೆಗೆ ಮುಂದಾಗಿದ್ದಾರೆ. ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಾಣ ಮಾಡಿದ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಪ್ರತಿದಿನ ನೂರಾರು ಮಂದಿ ಈ ಪಾರ್ಕ್ ನಲ್ಲಿ ವಾಯುವಿಹಾರ ಮಾಡುತ್ತಾರೆ. ಪಾರ್ಕ್ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿವೆ. ಗಿಡಗಂಟೆಗಳು ಪಾಲಿಕೆ ಅಧಿಕಾರಿಗಳನ್ನ ಅಣಕಿಸುತ್ತಿವೆ. ನಿರ್ವಹಣೆ ಕಾಣದ ಉದ್ಯಾನವನದ ಸ್ವಚ್ಛತೆಗೆ ಸ್ಥಳೀಯರ ನೆರವಿಗೆ ಮ.ವಿ.ರಾಮಪ್ರಸಾದ ಮುಂದಾಗಿದ್ದಾರೆ. ಖುದ್ದು ಸ್ವಚ್ಛತಾ ಪರಿಕರಗಳನ್ನ ಹಿಡಿದ ಮ.ವಿ.ರಾಮಪ್ರಸಾದ್ ಗಿಡಗಂಟೆಗಳನ್ನ ತೆರುವುಗೊಳಿಸುತ್ತಿದ್ದಾರೆ. ಪಾರ್ಕ್ ನಿರ್ವಹಣೆಗೆ ಸಿಬ್ಬಂದಿಗಳನ್ನ ನೇಮಿಸುವಂತೆ ಮ.ವಿ.ರಾಮಪ್ರಸಾದ್ ಪಾಲಿಕೆ ಆಯುಕ್ತರನ್ನ ಒತ್ತಾಯಿಸಿದ್ದಾರೆ. ಅವಧಿ ಮುಗಿದರೂ ಜನರ ಸೇವೆಗೆ ಮುಂದಾಗಿರುವ ಮ.ವಿ.ರಾಮಪ್ರಸಾದ್ ಇತರ ಮಾಜಿಗಳಿಗೂ ಮಾದರಿಯಾಗಿದ್ದಾರೆ…
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಲಯ 1ರ ಆಯುಕ್ತರಾದ ಮಂಜುನಾಥ್ ರೆಡ್ಡಿ, ಪೌರಕಾರ್ಮಿಕರು ಹಾಗೂ ಮುಖಂಡರಾದ ಶ್ರೀ ಸಂದೀಪ್, ಧರ್ಮೇಂದ್ರ, ಬಸವರಾಜು, ಧನರಾಜ್, ಮಂಜುನಾಥ್ , ಸಂತೋಷ್, ಲಕ್ಷ್ಮಣ್, ಸೋಮೇಶ್, ತೀರ್ಥ, ರಾಮಚಂದ್ರ, ಅರವಿಂದ್, ಶಿವು, ರವಿ ಮುಂತಾದವರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಕೈಜೋಡಿಸಿದರು
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

