ಸೊರಬ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾನು,ಅರಣ್ಯ ಕಂದಾಯ ಭೊಮಿ ಒತ್ತುವರಿ ತಡೆಯುವಂತೆ, ಉಪವಿಭಾಗ ಅಧಿಕಾರಿಗೆ ಮನವಿ

ಸೊರಬ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾನು,ಅರಣ್ಯ ಕಂದಾಯ ಭೊಮಿ ಒತ್ತುವರಿ ತಡೆಯುವಂತೆ, ಉಪವಿಭಾಗ ಅಧಿಕಾರಿಗೆ ಮನವಿ

ಸಾಗರ .ಸೊರಬ ತಾಲೂಕಿನ ಉಳವಿ ಹಾಗೂ ಚಂದ್ರಗುತ್ತಿ ಹೋಬಳಿಯ ಹಲವುಗ್ರಾಮಗಳಲ್ಲಿ ಕಾನು,ಅರಣ್ಯ,ಕಂದಾಯ, ಭೂಮಿಒತ್ತುವರಿಇತ್ತೀಚಿನ ದಿನಗಳಲ್ಲಿಹೆಚ್ಚುತ್ತಿದೆ. ಕಾಡುಪ್ರಾಣಿಗಳನ್ನು ವಿದ್ಯುತ್ ಹರಿಸಿ ಸಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇವುಗಳನ್ನು ತಡೆದುಕಾಡು ಮತ್ತು ವನ್ಯಜೀವಿಗಳನ್ನು ರಕ್ಷಿಸುವಂತೆ ವೃಕ್ಷಲಕ್ಷಆಂದೋಲನ ಹಾಗೂ ಸೊರಬದ ಪರಿಸರಜಾಗೃತಿಟ್ರಸ್ಟ್ ನೇತೃತ್ವದಲ್ಲಿಗುರುವಾರಇಲ್ಲಿನ ಉಪ ವಿಭಾಗ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಉಳುವಿ ಹೋಬಳಿಯ ಹಲಸಿನಕೊಪ್ಪ ಗ್ರಾಮದ ಸರ್ವೆ ನಂಬರ್ ನಾಲಕ್ಕರಲ್ಲಿಗ್ರಾಮಸ್ಥರುಕಾಪಾಡಿಕೊಂಡು ಬಂದಿರುವ 235 ಎಕರೆಅರಣ್ಯ ಮತ್ತು 152 ಎಕರೆ ಗೋಮಾಳಕ್ಕೆ ಅರಣ್ಯಇಲಾಖೆಯವರು ಸಿಪಿಟಿ ನಿರ್ಮಿಸಿದ್ದಾರೆ. ಆದರೂ ಸಾಗರತಾಲೂಕಿನ ಬೇಳೂರು ಗ್ರಾಮದ ಹಲವರುಇಲ್ಲಿಗೆ ನುಗ್ಗಿ ಕಾಡನ್ನು ನಾಶಪಡಿಸಿ, ಒತ್ತುವರಿಗೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ತೆರವು ಪ್ರಕ್ರಿಯೆ ವೇಳೆ ನೆಟ್ಟಿದ್ದ ಗಿಡಗಳನ್ನೂ ಕಿತ್ತುಅರಣ್ಯಒತ್ತುವರಿ ಮಾಡಿದ್ದಾರೆ. ಸೊರಬದ ಬರಗಿಗ್ರಾಮದ ಸರ್ವೆ ನಂಬರ್ 92ರಲ್ಲಿ 400 ಎಕರೆ ಮೀಸಲು ಅರಣ್ಯ ಅತಿಕ್ರಮಣಕ್ಕೊಳಗಾಗಿದೆ. ಚಂದ್ರಗುತ್ತಿ ಹೋಬಳಿಯ ದ್ಯಾವಗೋಡುಗ್ರಾಮದ ಸರ್ವೆ ನಂಬರ್ 5ರಲ್ಲಿ 220 ಎಕರೆಅರಣ್ಯ ಭೂಮಿಕಾಪಾಡಲು ಇಲಾಖೆ ಅಗಳ ತೆಗೆದಿತ್ತು. ಇಲ್ಲಿಯೂ ಹಲವರುಅತಿಕ್ರಮಣ ನಡೆಸಿದ್ದಾರೆ. ಮುಟಗುಪ್ಪೆಗ್ರಾಮದ ಸರ್ವೆ ನಂಬರ್ 27, 56ರ ಸೊಪ್ಪಿನ ಬೆಟ್ಟಕೂಡಒತ್ತುವರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೊರಬ ತಾಲೂಕಿನ ನೂರಾರುಎಕರೆಅರಣ್ಯ ಪ್ರದೇಶದಒತ್ತುವರಿ ಹೆಚ್ಚುತ್ತಿದ್ದು, ಬೆಲೆ ಬಾಳುವ ಅರಣ್ಯ ಮರಗಳ ನಾಶ ಹಾಗೂ ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ಪ್ರವೇಶಿಸುವಂತಾಗಿದೆ. ಇದರಿಂದ ಮಾನವ-ಕಾಡು ಪ್ರಾಣಿಗಳ ಸಂಘರ್ಷಕ್ಕೂದಾರಿಯಾಗುತ್ತಿದೆ. ತಾಲೂಕಿನಕಸಬಾ ಹೋಬಳಿಯ ಶಾಂತಗೆರೆಗ್ರಾಮದಲ್ಲಿಇತ್ತೀಚೆಗೆ ವಿದ್ಯುತ್ ಹರಿಸಿ ಜಿಂಕೆ, ಬರ್ಕ ಮುಂತಾದ ಕಾಡುಪ್ರಾಣಿಗಳನ್ನು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವುಗಳನ್ನು ಕಂದಾಯ, ಅರಣ್ಯ ಇಲಾಖೆ ಕೂಡಲೇತಡೆಗಟ್ಟಬೇಕುಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪರಿಸರಜಾಗೃತಿಟ್ರಸ್ಟಿನ ಶ್ರೀಪಾದ ಬಿಚ್ಚುಗತ್ತಿ, ವೃಕ್ಷಲಕ್ಷಆಂದೋಲನದಅಧ್ಯಕ್ಷಅನಂತ ಹೆಗಡೆ ಅಶೀಸರ, ವೆಂಕಟೇಶ ಕವಲಕೋಡು, ಆನೆಗುಳಿ ಸುಬ್ಬಣ್ಣ, ಬೇದೂರುಗಿರಿ, ಉದಯ ಬೇದೊರು ಸೇರಿದಂತೆ ಹಲಸಿನಕೊಪ್ಪ ಗ್ರಾಮಸ್ಥರು ಹಾಜರಿದ್ದು, ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *