ಎನ್.ಸಿ.ಸಿ.ಯಿಂದ ನಾನು ಜೀವನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಯಿತು – ಎಂ.ಎ.ಸಲೀಂ

ಸಾಗರ: “ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಪ್ರಕೃತಿ ವಿಕೋಪ, ಸಮಾಜಲ್ಲಿ ಆಗುವ ಅನೇಕ ದುರಂತಗಳಿಗೆ ಎನ್.ಸಿ.ಸಿ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಮಾಜಮುಖಿ ಕೆಲಸ ಮಾಡಲು ಅನುಕೂಲವಾಗುತ್ತಿದೆ. ನಾನು ಎಲ್.ಬಿ.ಕಾಲೇಜಿನಲ್ಲಿ ಎನ್.ಸಿ.ಸಿ. ಸೇರಿದಾಗ ನನ್ನ ಜೀವನದ ಭಾಗ್ಯದ ಬಾಗಿಲು ತೆರೆಯಿತು. ಹಳ್ಳಿಯಿಂದ ಬಂದ ನಾನು ಓದಲು ಹಣವಿಲ್ಲದೇ, ಕಾಲೇಜಿಗೆ ಸೇರಿದೆ.
ಆಡಳಿತ ಮಂಡಳಿ, ಕಾಲೇಜಿನ ಉಪನ್ಯಾಸಕರ ನೆರವಿನಿಂದ ನಾನು ಈಗ ದೊಡ್ಡ ಉದ್ಯಮಿ ಹಾಗೂ ಸಮಾಜದಲ್ಲಿ ಗಣ್ಯನಾಗಿದ್ದೇನೆ ಎನ್.ಸಿ.ಸಿ.ಯಲ್ಲಿ ಕಷ್ಟಪಟ್ಟು ಸಾದನೆ, ಸೈಕಲಿಂಗ್, ಈಜು, ಯೋಗ, ಹಿಮಾಲಯ ಚಾರಣ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬೈಕ್ ರ್ಯಾಲಿ, ಪ್ಯಾರಾ ಸೈಟಿಂಗ್, ವಿಪತ್ತು ನಿರ್ವಹಣೆ, ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಲು, ಸೈನ್ಯದ ವಿವಿಧ ವಿಭಾಗಗಳ ಅಧಿಕಾರಿಗಳೊಡನೆ ಒಡನಾಟ, ನನ್ನ ಜೀವನ ಚಕ್ರ ಬದಲಾಯಿಸಿತು.
ಅನೇಕ ರಾಜ್ಯ, ದೇಶ, ಅಂತರಾಷ್ಟ್ರೀಯ ಪ್ರಶಸ್ತಿ ಗಳಿಸಲು ಸಾಧ್ಯವಾಯಿತು. ನೀವೂ ಕೂಡ ಪರಿಶ್ರಮಪಟ್ಟು ವಿಜಯ ಸಾಧಿಸಿ, ಎನ್.ಸಿ.ಸಿ.ಯಿಂದ ಅನೇಕ ಪ್ರಯೋಜನಗಳಿವೆ, ವಿದ್ಯಾರ್ಥಿ ಜೀವನದಲ್ಲಿ ಸಾದನೆ ಮಾಡಲು ಎನ್.ಸಿ.ಸಿ.ಸಹಕಾರಿ” ಎಂದು ಎಲ್.ಬಿ. ಕಾಲೇಜಿನ ಹಳೇ ವಿದ್ಯಾರ್ಥಿ, ಅಂತರಾಷ್ಟ್ರೀಯ ಎನ್.ಸಿ.ಸಿ. ಪ್ರಶಸ್ತಿ, ಡ್ಯೂಕ್ ಆಫ್ ಎಡಿನ್ಬರ್ಗ್ ಪುರಸ್ಕøತರಾದ ಎಂ.ಎ. ಸಲೀಂ ರವರು ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನಲ್ಲಿ ಜನವರಿ 26, 2024ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಎನ್.ಸಿ.ಸಿ. ಪಥಸಂಚಲನ ರಾಜ್ಯಮಟ್ಟದ ಆಯ್ಕೆ ಶಿಬಿರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಮತ್ತು ಎಲ್.ಬಿ.ಮತ್ತು ಎಸ್.ಬಿ.ಎಸ್. ಕಾಲೇಜಿನ ಆವರಣದಲ್ಲಿ ನಡೆಸುತ್ತಿರುವ ಶಿಬಿರದಲ್ಲಿ ವಿಶೇಷ ಆಹ್ವಾನಿತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶ್ರೀಮತಿ ಅನುಪಮ ಸಾರಂಗ, ಅಧ್ಯಕ್ಷರು, ಖಂಡಿಕಾ ಗ್ರಾಮಪಂಚಾಯಿತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.ಎಂ.ಶಿವಕುಮಾರ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕೆ.ವೆಂಕಟೇಶ್ ಕವಲಕೋಡು, ಖಜಾಂಚಿಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಎಂ.ಆರ್. ಸತ್ಯನಾರಾಯಣ, ಸಹಕಾರ್ಯದರ್ಶಿ, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಪ್ರೊ. ಬಿ.ಸಿ. ಶಶಿಧರ, ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳ ಸಂಘ, ಸಂಚಾಲಕರು, ಸ್ಥಾಯಿ ಸಮಿತಿ, ಡಾ.ಲಕ್ಷ್ಮೀಶ ಎ.ಎಸ್. ಪ್ರಾಂಶುಪಾಲರು ಎಲ್.ಬಿ.ಮತ್ತು ಎಸ್.ಬಿ.ಎಸ್ ಕಾಲೇಜು, ಲೆಫ್ಟಿನೆಂಟ್ ನೂತನ ಹೆಚ್.ಡಿ. ಭಾಗವಹಿಸಿದ್ದರು.

ಮೊದಲು JUO ದಿಶಾ ಎಲ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. JUO ಮೇಘಾ ಎಸ್. ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು CQMS ನಂದಿತಾ ನಡೆಸಿಕೊಟ್ಟರು.



