ಎನ್.ಸಿ.ಸಿ.ಗೆ ಸಾಗರಕ್ಕೆ ಹೆಮ್ಮೆಯ ಅವಕಾಶ ಫೈರಿಂಗ್ ರೇಂಜ್ ಸ್ಥಾಪನೆ – ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ

ಸಾಗರ: “ಎನ್.ಸಿ.ಸಿ.ವಿದ್ಯಾರ್ಥಿ ಜೀವನದಲ್ಲಿ ಒಂದು ಅವಕಾಶ, ಇದರಿಂದ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ಶಿಸ್ತು, ಆಟೋಟಗಳ ಆಸಕ್ತಿ ಕೆರಳಿಸುತ್ತಿದೆ. ಉತ್ತಮ ಆರೋಗ್ಯ ನಿರ್ಮಾಣವಾಗಿ ಸಧೃಢರಾಗಿ, ಜೀವನ ಶೈಲಿ ನಡೆಸಲು ಸಾಧ್ಯ. ಎನ್.ಸಿ.ಸಿ.ಚಟುವಟಿಕೆಗಳಲ್ಲಿ ಭಾಗವಹಿಸಿ ವಿವಿಧ ತರಭೇತಿ ಪಡೆದುಕೊಳ್ಳಲು ಸಹಕಾರಿಯಾಗಿದೆ ಯುವಕರು ತಮ್ಮ ಕಾಲೇಜ್ ಜೀವನದಲ್ಲೂ ಶಿಸ್ತು ಬದ್ಧರಾಗಿ ದೇಶ ಪ್ರೇಮಿಗಳಾಗಿ ಜೀವನ ನಡೆಸುತ್ತಿದ್ದಾರೆ.”
ಈ ಶುಭ ದಿನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಎಲ್.ಬಿ.ಕಾಲೇಜಿನ ಎನ್.ಸಿ.ಸಿ.ಫೈರಿಂಗ್ ರೇಂಜ್ ನಿರ್ಮಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು, ಜಿಲ್ಲೆಯಲ್ಲಿ ಒಂದು ಮದರಿ ಫೈರಿಂಗ್ ರೇಂಜ್ ಆಗಲಿದೆ. ಸಾವಿರಾರು ಜನ ಎನ್.ಸಿ.ಸಿ.ವಿದ್ಯಾರ್ಥಿಗಳು ಇದರಿಂದ ಉಪಯೋಗ ಪಡೆಯುತ್ತಾರೆ. ಜನವರಿ ೨೬, ೨೦೨೪ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ದಿನದ ಪಥ ಸಂಚಲನಗಳ ಆಯ್ಕೆಯಾಗಲು ಇದರಿಂದ ಪ್ರೇರಣೆಯಾಗಿದೆ.

ಮುಂದಿನ ದಿನಗಳಲ್ಲಿ ಇದು ಒಂದು ಮಾದರಿ ಫೈರಿಂಗ್ ರೇಂಜ್ ಆಗಲಿದೆ. ಅದಕ್ಕೆ ನೀವುಗಳು ನೀಡಿದ ಸಹಕಾರ ಮುಂದುವರೆಯಲಿ. ಇದರಿಂದ ಜಿಲ್ಲೆಯ ಲಕ್ಷಾಂತರ ಎನ್.ಸಿ.ಸಿ.ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂದು ಕರ್ನಲ್ ಎನ್.ಕೆ.ಭಗಾಸ್ರ ಇವರು ಫೈರಿಂಗ್ ರೇಂಜ್ ಅನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಲ್ ಅರುಣ್ ಯಾದವ್, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.ಎಂ.ಶಿವಕುಮಾರ್ ಕೆ.ವೆಂಕಟೇಶ್ ಕವಲಕೋಡು, ಖಜಾಂಚಿಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಎಂ.ಆರ್. ಸತ್ಯನಾರಾಯಣ, ಸಹಕಾರ್ಯದರ್ಶಿ, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಪ್ರೊ. ಬಿ.ಸಿ. ಶಶಿಧರ, ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳ ಸಂಘ, ಸಂಚಾಲಕರು, ಸ್ಥಾಯಿ ಸಮಿತಿ, ಡಾ.ಲಕ್ಷಿö್ಮÃಶ ಎ.ಎಸ್. ಪ್ರಾಂಶುಪಾಲರು ಎಲ್.ಬಿ.ಮತ್ತು ಎಸ್.ಬಿ.ಎಸ್ ಕಾಲೇಜು, ಲೆಫ್ಟಿನೆಂಟ್ ನೂತನ ಹೆಚ್.ಡಿ. ಭಾಗವಹಿಸಿದ್ದರು.
ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ೪೫೦ಕ್ಕೂ ಮಿಕ್ಕಿ ಎನ್.ಸಿ.ಸಿ. ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಿಂದ ಭಾಗವಹಿಸಿ ತರಬೇತಿ ಪಡೆಯುತ್ತಾರೆ.



