ಹೊಸ ಬಗೆಯ ಕಥೆ ಹೇಳೋಕೆ ಭಟ್ರು ಸಿದ್ದವಾಗ್ತಿದ್ದಾರೆ, ಕಾರಟಕ- ಡಮನಕ

ಹೊಸ ಬಗೆಯ ಕಥೆ ಹೇಳೋಕೆ ಭಟ್ರು ಸಿದ್ದವಾಗ್ತಿದ್ದಾರೆ, ಕಾರಟಕ- ಡಮನಕ

ಕಾಲೇಜ್ ಹುಡುಗರ ಲವ್ ಸ್ಟೋರಿ, ಚೇಷ್ಟೆ ಮತ್ತು ಪ್ರಣಯ ಪ್ರಸ0ಗಗಳನ್ನು ತಮ್ಮ ಎಲ್ಲಾ ಸಿನಿಮಾಗಳಲ್ಲಿ ತುಂಬಿ ಮನರಂಜಸ್ತಿದ್ದ ಯೋಗರಾಜ ಭಟ್ಟರು ಇದೀಗ ಕ್ರೈಮ್ ಥ್ರಿಲ್ಲರ್ ಕಥೆಯೊಂದನ್ನ ಹೇಳೋಕೆ ಮುಂದಾಗಿದ್ದಾರೆ, ಸಿನಿಮಾಗೆ ಕರಟಕ ಡಮನಕ ಅನ್ನೋ ಹೆಸರಿಟ್ಟಾಗಿದೆ, ಮೊದಲಿಗೆ ಶೀರ್ಷಿಕೆಯ ಅರ್ಥವೇನು ಅನ್ನೋದನ್ನ ನೋಡೋಣ, ಪಂಚತಂತ್ರ ನೀತಿ ಕಥೆಗಳಲ್ಲಿ ಬರುವ ಎರಡು ಜಾಣ ನರಿಗಳ ಹೆಸರು ಇದು. ಸದಾ ಏನನ್ನಾನ ಯೋಚಿಸುತ್ತ, ತಂತ್ರ ಮಾಡುವವರಿಗೆ ನಾವು ಸಾಮಾನ್ಯವಾಗಿ ಲೇ ಕರಟಕ ಡಮನಕ ಅಂತ ಕರೀತೀವಿ ಈಗ ಯೋಗರಾಜ ಭಟ್ರು ಕೂಡ ಅದನ್ನೇ ಮಾಡ್ತಿದ್ದಾರೆ ಅನ್ಸುತ್ತೆ…

ಅಂದಹಾಗೆ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರಗಳಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಮತ್ತೆ ಡ್ಯಾನ್ಸ್ ಕಿಂಗ್ ಪ್ರಭುದೇವಾರ ಭಲೇ ಜೋಡಿ ಇದ್ದು, ಡಾನ್ಸ್ ಕುರಿತಾದಂತಹ ಒಂದು ಸನ್ನಿವೇಶವು ಬರಬಹುದು ಅನ್ನೋ ಪ್ರಸ್ತಾಪವು ಬಂದಿದೆ. ಚಿತ್ರಕ್ಕೆ ವಿ ಹರಿ ಕೃಷ್ಣಾರ ಸಂಗೀತವಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾತ್ರರಾಗಿದ್ದಾರೆ. ಸಿನಿಮಾದ ಶೂಟಿಂಗ್ ಅರ್ಧಕ್ಕೂ ಹೆಚ್ಚುಯೂ ಮುಗಿದಿದ್ದು ಮುಂದಿನ ವರ್ಷ ಸಂಕ್ರಾಂತಿಯ ವೇಳೆಗೆ ತೆರೆಕಾಣಲಿದೆ

ವರದಿ: P. ಘನಶ್ಯಾಮ್ – ಬೆಂಗಳೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116
Website :www.shivamotors.net

Leave a Reply

Your email address will not be published. Required fields are marked *