ಜುಲೈ 27 ರಂದು ಓಲಾ, ಊಬರ್, ಆಟೋ, ಟ್ಯಾಕ್ಸಿ ಸೇವೆ ಜೊತೆಗೆ ಖಾಸಗಿ ಬಸ್ ಸೇವೆಯೂ ಸ್ಥಗಿತ

ಜುಲೈ 27 ರಂದು ಓಲಾ, ಊಬರ್, ಆಟೋ, ಟ್ಯಾಕ್ಸಿ ಸೇವೆ ಜೊತೆಗೆ ಖಾಸಗಿ ಬಸ್ ಸೇವೆಯೂ ಸ್ಥಗಿತ

ಬೆಂಗಳೂರು: ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲೊಂದಾದ ಶಕ್ತಿಯೋಜನೆಯನ್ನ ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗವನ್ನ ಪಡೆಯುತ್ತಿದ್ದಾರೆ. ಆದರೆ, ಇದರಿಂದ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್​ಗಳಿಗೂ ದೊಡ್ಡ ಮಟ್ಟದ ತೊಂದರೆ ಉಂಟಾಗಿದ್ದು, ಖಾಸಗಿ ಸಾರಿಗೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆ ಇದೇ ಜುಲೈ 26ರ ಮಧ್ಯರಾತ್ರಿಯಿಂದ ಜುಲೈ 27ರ ಮಧ್ಯರಾತ್ರಿವರೆಗೆ ಶಕ್ತಿ ಯೋಜನೆ ವಿರೋಧಿಸಿ ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇವೆ ಜೊತೆಗೆ ಖಾಸಗಿ ಬಸ್​​ಗಳು ಕೂಡ ಸೇವೆ​ ನಿಲ್ಲಿಸಲಿವೆ.​ ಈ ಕುರಿತು ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್​ಗೆ ಕರೆ ನೀಡಲಾಗಿದೆ.
ಇಲ್ಲಿದೆ ಮಾಹಿತಿ
ಇನ್ನು ಬಂದ್​ ಕುರಿತು ಮಾತನಾಡಿದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ‘ ಜುಲೈ 26 ನೇ ತಾರೀಖು ಮಧ್ಯರಾತ್ರಿ 12 ಗಂಟೆಯಿಂದ 27 ನೇ ತಾರೀಖು ರಾತ್ರಿ 12 ಗಂಟೆಯವರೆಗೂ ಆಟೋ, ಟ್ಯಾಕ್ಸಿ, ಓಲಾ, ಊಬರ್ ಯಾವುದೇ ವೆಹಿಕಲ್ ಓಡಾಟ ಮಾಡಲ್ಲ. ಇವತ್ತು ಖಾಸಗಿ ಸಾರಿಗೆಯ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯುತ್ತೆವೆ. ಇನ್ನು ಅಂದು ಖಾಸಗಿ ಬಸ್​ಗಳು ಕೂಡ ಓಡಾಟ ಮಾಡಲ್ಲ ಎಂದರು.
ಬೆಂಗಳೂರಿನಲ್ಲಿ ಇರುವ ಖಾಸಗಿ ಮಾಲೀಕರಿಗೆ ಮನವಿ ಮಾಡುತ್ತೇವೆ. ಶಕ್ತಿ ಯೋಜನೆಯಿಂದ ತುಂಬಾ ಹೊಡೆತ ಬಿದ್ದಿದೆ‌. ಶಕ್ತಿಯೋಜನೆಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿ, ಒಂದೂ ಮಾರ್ಗಸೂಚಿ ಇಲ್ಲದೇ ಇರುವುದರಿಂದ ನಮ್ಮ ಖಾಸಗಿ ಬಸ್​ಗಳಿಗೆ ನಷ್ಟ ಆಗುತ್ತಿದೆ. ಅದರ ಬದಲು ಬಸ್​ಗಳಲ್ಲಿ ಎಷ್ಟು ಸೀಟ್ ಇರುತ್ತದೆಯೋ ಅಷ್ಟೇ ಸೀಟ್ ಹಾಕಬೇಕು ಎಂದು ಮಾಡಿ. ಸರ್ಕಾರಿ ಬಸ್​ಗಳಂತೆ ಖಾಸಗಿ ಬಸ್​ಗಳನ್ನ ಕೂಡ ಶಕ್ತಿ ಯೋಜ‌ನೆಗೆ ಕಿಮೀ ಮಿತಿಯಲ್ಲಿ ಬಳಸಿಕೊಳ್ಳಿ ಎಂದರು.
ಇನ್ನು ಸರ್ಕಾರದ ಶಕ್ತಿ ಯೋಜನೆ ವಿರುದ್ದ ಬಂದ್​ಗೆ ಕರೆ ನೀಡಿರುವ ಖಾಸಗಿ ವಾಹನಗಳ ಮಾಲೀಕರ ಬೆಂಬಲಕ್ಕೆ ಕನ್ನಡ ಸಂಘಟನೆಗಳು ಬೆಂಬಲ ಕೊಡಲು ಒಪ್ಪಿದ್ದಾರೆ. ಅವರು ಕೂಡ ಹೋರಾಟದಲ್ಲಿ ಪಾಲ್ಗೋಳ್ಳುತ್ತಾರೆ. ಜೊತೆಗೆ ನಾವು ಬೇರೆ ಬೇರೆ ಸಂಘಟನೆಗಳ ಬೆಂಬಲವನ್ನ ಕೋರಿದ್ದೆವೆ. ಬೇರೆ ಸಂಘಟನೆಗಳು ಕೂಡ ಬೆಂಬಲ ಕೊಡುತ್ತಾರೆ ಎಂದು ಆದರ್ಶ್ ಆಟೋ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *