ವರುಣನ ಕೃಪೆಗಾಗಿ ಕತ್ತೆಗಳ ಮದುವೆ ಹಾಗೂ ಮೆರವಣಿಗೆ ಭೂರೀ ಭೋಜನ ವ್ಯವಸ್ಥೆ-

ವರುಣನ ಕೃಪೆಗಾಗಿ ಕತ್ತೆಗಳ ಮದುವೆ ಹಾಗೂ ಮೆರವಣಿಗೆ ಭೂರೀ ಭೋಜನ ವ್ಯವಸ್ಥೆ-

ಹನಸಿ:ವಿಜಯನಗರ ನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ: ಕಾಲಾನುಸಾರ ಮಳೆ ಬಾರದ ಹಿನ್ನೆಲೆಯಲ್ಲಿ, ತಾಲೂಕಿನ ಹನಸಿ ಗ್ರಾಮದಲ್ಲಿ. ಗ್ರಾಮಸ್ಥರೆಲ್ಲರೂ ಸೇರಿ ಮಳೆರಾಯನ ಕೃಪೆಗಾಗಿ, ಜೂ24ರಂದು ಸಾಂಪ್ರದಾಯಿಕ ಕತ್ತೆಗಳ ಮದುವೆ ಹಾಗೂ ಮೆರವಣಿಗೆ ಮಾಡಲಾಯಿತು. ಬರ ಸೃಸ್ಠಿಯಾಗುವ ವಾತಾವರಣ ಸೃಷ್ಠಿಯಾಗಿರುವ ಬೆನ್ನಲ್ಲೆ , ಸಕಾಲಕ್ಕೆ ಮಳೆಗಾಗಿ ಪ್ರಾರ್ಥಿಸಿ ಹನಸಿ ಗ್ರಾಮದಲ್ಲಿ. ಗ್ರಾಮದ ಸರ್ವ ಧರ್ಮಿಯರೊಡಗೂಡಿ, ಸಾಂಪ್ರದಾಯದಂತೆ ಕತ್ತೆಗಳ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಗ್ರಾಮದ ಹಿರಿಯರೆಲ್ಲರು ಒಗ್ಗೂಡಿ ಸಕಾಲಕ್ಕೆ ವರ್ಷಧಾರೆ ಕರುಣಿಸುವಂತೆ, ನೂತನ ವಧು-ವರ ಕತ್ತೆಗಳ ಜೋಡಿಗಳೊಂದಿಗೆ ಗ್ರಾಮದೇವರಲ್ಲಿ ಹಾಗೂ ವರುಣದೇವರಲ್ಲಿ ಮೊರೆಯಿಟ್ಟಿರುವ ಪ್ರಸಂಗ ನಡೆದಿದೆ.
ದೈವಸ್ಥರು ಗ್ರಾಮದಲ್ಲಿರುವ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ತಂದು, ಗಂಡು ಕತ್ತೆಗೆ ಹೊಸ ಪಂಚೆ, ಟವಲು ತೊಡಿಸಿದರೆ ಹೆಣ್ಣು ಕತ್ತೆಗೆ ಸೀರೆ, ಖಣ ತೊಡಿಸಿದರು. ಅರಿಷಿಣ, ಸುರಗಿ ಶಾಸ್ತ್ರವನ್ನು ಮಹಿಳೆಯರು ನೆರವೇರಿಸಿದರು. ಗಂಡು ಮತ್ತು ಹೆಣ್ಣು ಕತ್ತೆಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕಿ ಮದುಮಕ್ಕಳಂತೆ ಸಿಂಗರಿಸಿದ್ದರು. ಶಾಸ್ತ್ರೋಕ್ತ ವಾಗಿ ಮಂತ್ರಾಕ್ಷತೆಗಳೊಂದಿಗೆ , ಕತ್ತೆಗೆ ತಾಳಿ ಕಟ್ಟುವ ಶಾಸ್ತ್ರವೂ ನಡೆಯಿತು.
“ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ” ಎಂದು, ಪುರೋಹಿತರೋರ್ವರು ಮದುವೆ ಮಂತ್ರ ಹೇಳಿದರು. ನೆರೆದವರೆಲ್ಲರು ನೂತನ ವಧು ವರ ಕತ್ತೆಗಳಿಗೆ ಅಕ್ಷತೆ ಹಾಕಿದರು, ನೂತನ ಜೋಡಿಗಳು ಮುತ್ತೈದೆಯರು ಸೋಬಾನೆ ಹಾಡು ಹೇಳಿ ಆರತಿ ಬೆಳಗಿ ಶುಭಹಾರೈಸಿದರು.
ಬಾಜಾ ಭಜಂತ್ರಿ, ಹಲಗೆ ವಾಧ್ಯ ಗಳೊಂದಿಗೆ ಮೆರವಣಿಗೆ, ಡಿಜೆ ಸೌಂಡಿನೊಂದಿಗಿನ ಹಾಡುಗಳ ಅಬ್ಬರ ಎಲ್ಲೆ ಮೀರಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡಿ ಕತ್ತೆಗಳ ಮೆರವಣಿಗೆ, ಭಾರೀ ಅದ್ದೂರಿಯಾಗಿ ವಿಜೃಂಭಣೆಯಿಂದ ಮಾಡಿದರು.
ಹನಸಿ ಗ್ರಾಮದ ದೈವಸ್ಥರಾದ ಹರಿಜನ ಚೌಡಪ್ಪ , ಮತ್ತಳ್ಳಿ ರಾಜಪ್ಪ, ಛಾಯಾಗ್ರಾಹಕ ಪರಮೇಶ, ಸೀಮೆ ಎಣ್ಣೆ ಕರಿಯಪ್ಪ,ಟಿ.ಓಬಳೇಶ, ತಿತ್ತಿ ಬಸಪ್ಪ, ಕೊಟ್ರೇಶ, ಕೊರಜ್ಜ,ಅಮ್ಮನಕೇರಿ ಸಿದ್ದಪ್ಪ,ಮಂಜುನಾಧ ಗೌಡ್ರು,ಪರಶರಾಮ,ಕಜ್ಜೀ ರಾಮಣ್ಣ ಸೇರಿದಂತೆ. ಗ್ರಾಮದ ಗಣ್ಯಮಾನ್ಯರು, ಜನಪ್ರತಿನಿಧಿಗಳು, ಗ್ರಾಮದ ವಿವಿದ ಸಮಾಜದ ಹಿರಿಯರು, ಮಹಿಳೆಯರು, ಮುತ್ತೈದೆಯರು, ಯುವಕ- ಯುವತಿಯರು, ಬಾಲ-ಬಾಲೆಯರು, ಮಕ್ಕಳು ಕತ್ತೆಗಳ ಮದುವೆ ಹಾಗೂ ಮೆರವಣಿಗೆಗೆ ಸಾಕ್ಷಿಯಾದರು. ನವ ಜೋಡಿ ಕತ್ತೆಗಳಿಗೆ ಮಹಿಳೆಯರು ವಸ್ತ್ರ ಸಿಂಗಾರ ಮಾಡಿದ್ದರು.
ನಂತರ ಮುತ್ತೈದೆಯರು ನವಜೋಡಿ ಕತ್ತೆಗಳಿಗೆ, ಆರತಿ ಬೆಳಗಿ ಹರಸಿದರು. ಕೊನೆಯಲ್ಲಿ ಮದುವೆಯಲ್ಲಿ ಭಾಗಿಯಾದವರಿಗೆ, ಸಿಹಿ ಖಾಧ್ಯ ವನ್ನೊಳಗೊಂಡಂತೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *