ರಸ್ತೆಯ ತುದಿ ಭಾಗವನ್ನ ಸರಿಪಡಿಸಿ.

ರಸ್ತೆಯ ತುದಿ ಭಾಗವನ್ನ ಸರಿಪಡಿಸಿ.

ಸಾಗರ:ನಗರದ ರಾಷ್ಟ್ರೀಯ ಹೆದ್ದಾರಿ 206 ಸಂಪರ್ಕಿಸುವ ಬೆಳಲಮಕ್ಕಿಯ 1ನೇಮುಖ್ಯ ರಸ್ತೆಯ ಪರಿಸ್ಥಿತಿ ನೋಡಿದರೆ ಅಧಿಕಾರಿಗಳ ಬೇಜವಾಬ್ದಾರಿತನ ಸಾರ್ವಜನಿಕರ ಕಣ್ಣಿಗೆ ರಾಚು ವಂತಿದೆ. ಕಳೆದ ಎರಡು ತಿಂಗಳ ಹಿಂದೆ ಅಗೆದ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಬೆಳಲುಮಕ್ಕಿಗೆ ಹೋಗುವ ರಸ್ತೆಯಲ್ಲಿ ಅಗೆದು ಹಾಕಿದ ಭಾಗಕ್ಕೆ ಜಲ್ಲಿಯನ್ನು ಸರಿಯಾಗಿ ಹಾಕದೆ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈಗಾಗಲೇ ಇಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಆದರೆ ಪಕ್ಕದಲ್ಲಿ ಮಾರ್ವಾಡಿ ಯ ಕಲ್ಲು ವ್ಯಾಪಾರ ಮಾಡುವ ಮಳಿಗೆಗೆ ವ್ಯವಸ್ಥಿತವಾಗಿ ಜಲ್ಲಿ ಹಾಕಿ
ರಾಜಮಾರ್ಗ ಮಾಡಿ ಕೊಡಲಾಗಿದೆ .ಬೆಳಲಮಕ್ಕಿಯ ಜನರು ಕೊಡುವ ತೆರಿಗೆ ನಿಮಗೆ ಲೆಕ್ಕಕ್ಕೆ ಇಲ್ಲವೇ ಅದೇ ಪಕ್ಕದ ಮಾರವಾಡಿ ಕೊಡುವ ತೆರಿಗೆ ನಿಮಗೆ ಹೆಚ್ಚಾಯಿತೆ ?

ಸಾಗರ ನಗರಸಭೆಯ ಅಧಿಕಾರಿಗಳೇ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ಪಿ. ಡಬ್ಲ್ಯೂ. ಡಿ ಅಧಿಕಾರಿಗಳೇ ಇದನ್ನು ನೋಡಿಯೂ ನೋಡದೆ ಇರುವುದು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೊದಲು ಈ ರಸ್ತೆಯನ್ನು ಸರಿಪಡಿಸಿ ಇಲ್ಲದಿದ್ದರೆ ಹೋರಾಟ ಮಾಡಬೇಕಾದಿತು ಎಂದು ಇಲ್ಲಿಯ ಜನ ಎಚ್ಚರಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *