ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಶ್ರೀ ಶಂಕರ ಮಠದಲ್ಲಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ.

ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಶ್ರೀ ಶಂಕರ ಮಠದಲ್ಲಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ.

ಕೃಷ್ಣರಾಜ ಕ್ಷೇತ್ರದ ನೂತನ ಶಾಸಕರಾದ ಶ್ರೀ ಟಿ ಎಸ್ ವತ್ಸರವರು ಮಾತನಾಡಿ ” ಶಂಕರಾಚಾರ್ಯರು ತಮ್ಮ ಬಹಳ ಕಡಿಮೆ ವಯಸ್ಸಿನಲ್ಲಿಯೇ ದೇಶಾದ್ಯಂತ ಪರ್ಯಟನೆ ಮಾಡಿ ಹಿಂದೂ ಧರ್ಮವನ್ನು- ಭಾರತದ ಸಂಸ್ಕೃತಿಯನ್ನು ಜಗತ್ತಿನ ಸಾರಿ ಹೇಳಿದರು. ಅಂದು ಹಿಂದೂ ಧರ್ಮ ಅವನತಿಯಲ್ಲಿದ್ದ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾನುಭಾವರು. ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದವರು. ಈ ಶಂಕರ ಮಠದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುತ್ತಿರುವುದು, ಇಂತಹ ಮಹನೀಯರ ಜಯಂತಿಯನ್ನು ಕರ್ನಾಟಕ ಸೇನಾ ಪಡೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯುಪಿಎಸ್‌ಸಿನಲ್ಲಿ 390ನೇ ರಾಂಕ್ ಪಡೆದ ಕುಮಾರಿ. ಪೂಜಾ ಮುಕುಂದ್, ಚೆಸ್ಕಾಂ ಕಾರ್ಯನಿರ್ವಾಹಕ ಅಭಯಂತರ ಪೂರ್ಣಚಂದ್ರ ತೇಜಸ್ವಿ ಆರ್, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಡಾ. ವಸಂತ್ ಕುಮಾರ್ ಕೆಆರ್, ಶ್ರೀ ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳ ನೌಕರರ ಸಂಘದ ಅಧ್ಯಕ್ಷ ಶ್ರೀ ಎನ್ ಶ್ರೀಧರ್ ದೀಕ್ಷಿತ್, ವಿಜಯ ವಿಠಲ ಪಿಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಶ್ರೀ ರಾಜೇಶ್ ಈಶ್ವರ್, ಅಬಾಕಸ್ ಅಕಾಡೆಮಿಯ ಶ್ರೀಕಾಂತ್ ಭಟ್, ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾದ ಶ್ರೀ ರಾಮಕೃಷ್ಣ ಪರದ್ವಾಜ್ ರವರುಗಳಿಗೆ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಶ್ರೀ ಸಿಜಿ ಗಂಗಾಧರ್ ರವರು ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಡಾ. ಬಿಆರ್ ನಟರಾಜ್ ಜೋಯ್ಸ್ ರವರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಈ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಚಾಮರಾಜ ಕ್ಷೇತ್ರದ ನೂತನ ಶಾಸಕರಾದ ಶ್ರೀ ಹರೀಶ್ ಗೌಡರವರು ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿ ಮಕ್ಕಳು ಮುಂದೆ ಇನ್ನೂ ಚೆನ್ನಾಗಿ ಓದಿ ಕುಮಾರಿ ಪೂಜಾ ಮುಕುಂದರಂತೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆಯಬೇಕು, ಮೈಸೂರಿಗೆ ಇನ್ನೂ ಹೆಚ್ಚಿನ ಹೆಸರು ತರಬೇಕು, ನಿಮ್ಮ ತಂದೆ ತಾಯಂದರಿಗೆ ಗೌರವವನ್ನು ನೀಡಬೇಕು, ಅವರ ಮನದ ಆಸೆಗಳನ್ನು ನೆರವೇರಿಸಬೇಕು ಎಂದರು. ನೆರವೇರಿಸಬೇಕು ಎಂದರು.

ಶ್ರೀ ಶಂಕರಾಚಾರ್ಯರ ಕುರಿತು ಪ್ರಧಾನ ಭಾಷಣವನ್ನು ಹಿರಿಯ ವಿದ್ವಾಂಸರು ಡಾ. ಲೀಲಾ ಕೆ. ಪ್ರಕಾಶ್ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಡಾ. ಪುಷ್ಪಾ ಎ ಅಯ್ಯಂಗಾರ್, ವೈದೇಹಿ ಅಯ್ಯಂಗಾರ್, ಲಯನ್ ಗೋಲ್ಡ್ ಸುರೇಶ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಚಾ ರಂ ಶ್ರೀನಿವಾಸ ಗೌಡ, ರಘು ರಾಜೇ ಅರಸ್, ಡಾ. ಶಾಂತರಾಜೇಅರಸ್, ಪ್ರಭುಶಂಕರ ಎಂ ಬಿ, ವಿಜಯೇಂದ್ರ, ಪ್ರಭಾಕರ, ಸಿದ್ದರಾಜು, ದರ್ಶನ್ ಗೌಡ ಅಂಬಾ ಅರಸ್, ಕೃಷ್ಣಮೂರ್ತಿ, ಕೃಷ್ಣ, ಅಂಬಾ ಅರಸ್, ರಾಜಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *