ಸಂಪುಟ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು

ಇಂದು ದೇಶದ ಮೊದಲ ಪ್ರಧಾನಿ ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಭದ್ರ ಬುನಾದಿ ಹಾಕಿದ ಶ್ರೇಷ್ಠ ನಾಯಕ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಯಂದು ನಾವು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ.

ನೆಹರೂ ಅವರ ಆಚಾರ ವಿಚಾರಗಳ ಬಗ್ಗೆ ದೊಡ್ಡ ಅಧ್ಯಯನ ಮಾಡಬಹುದು.

ಅವರ ಪಂಚ ವಾರ್ಷಿಕ ಯೋಜನೆ ಇಡೀ ದೇಶದಲ್ಲಿ ಸಾರ್ವಜನಿಕ ಉದ್ದಿಮೆಗಳ ಸ್ಥಾಪನೆ, ದೇಶದಲ್ಲಿ ಹಸಿವು ನೀಗಿಸಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ತೆಗೆದುಕೊಂಡ ನಿರ್ಧಾರ, ವಿದೇಶಾಂಗ ನೀತಿಗಳು, ದೇಶದ ಸಂವಿಧಾನಕ್ಕೆ ಕೊಟ್ಟ ಭದ್ರ ಬುನಾದಿ ಮರೆಯಲು ಸಾಧ್ಯವಿಲ್ಲ.

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದೇರೀತಿ ನೆಹರೂ ದೇಶಕ್ಕೆ ದೊಡ್ಡ ಇತಿಹಾಸ ಕೊಟ್ಟಿದ್ದು, ನಾವು ಅವರ ಹಾದಿಯಲ್ಲಿ ಹೆಜ್ಜೆ ಹಾಕಬೇಕಿದೆ. ಆಮೂಲಕ ದೇಶವನ್ನು ಅಭಿವೃದ್ಧಿಶೀಲ ದೇಶವನ್ನಾಗಿ ಮಾಡಿದ್ದೇವೆ.

ನೆಹರೂ ಅವರು ಪಾಲಿಕೆ ಅಧ್ಯಕ್ಷ ಸ್ಥಾನದಿಂದ ದೇಶದ ಪ್ರಧಾನಮಂತ್ರಿ ಹುದ್ದೆವರೆಗೂ ಬೆಳೆದ ಧೀಮಂತ ನಾಯಕರು.

ಈ ಸಂದರ್ಭದಲ್ಲಿ ಪಕ್ಷದ ಪರವಾಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *