ರಾಜ್ಯದ ಹಾಗೂ ಸಾಗರದ ಎಲ್ಲಾ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಉಲ್ ಫಿತರ್ ಆಚರಣೆ ಹಬ್ಬದ ಹಾರ್ಥಿಕ ಶುಭಾಶಯಗಳು-ಸಿಸಿಲ್ ಸೋಮನ್ ಹಿಂದ್ ಸಮಾಚಾರ (ಸಿ ಇ ಓ)
ಸಾಗರ: ರಾಜ್ಯದಾದ್ಯಂತ ಮುಸ್ಲಿಂ ಬಾಂಧವರು ಇಂದು ಈದ್ ಫಿತರ್ ಆಚರಿಸುತ್ತಿದ್ದು. ಹಬ್ಬದ ಪ್ರಯುಕ್ತ ನಗರದ ಕೆಳದಿ ರಸ್ತೆಯಲ್ಲಿ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಾಮೂಹಿಕ ನಮಾಜ್ ಬೆಳಗ್ಗೆ 9.30 ರಿಂದ 10.30 ರವರೆಗೆ ಒಂದು ಗಂಟೆ ಕಾಲ ನಡೆದಿದ್ದು, ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ರಂಜಾನ್ ಮುಸ್ಲಿಮರ ದೊಡ್ಡ ಹಬ್ಬ. ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನ ಧರಿಸಿ,ಈ ದಿನ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಪ್ರೀತಿಯ ಶುಭಾಶಯವನ್ನು ಕೋರುತ್ತಾರೆ. ರಂಜಾನ್ ಆಚರಣೆಯ ದಿನಾಂಕ ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರನ ದರ್ಶನವಾದ ಬಳಿಕ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಹಿನ್ನೆಲೆ ಮುಸಲ್ಮಾನರು ನಿನ್ನೆವರೆಗೂ ರೋಜ ಇದ್ದರು. ಇದೀಗ ನಮಾಜು ಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಂಜಾನ್ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಕುರಾನ್ ಅನಾವರಣಗೊಂಡಿತು ಎಂದು ಈ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅಪಾರ ಮಹತ್ವವನ್ನು ಹೊಂದಿದೆ.
ಇದು ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಿನಲ್ಲಿ ಬರುತ್ತದೆ ಮತ್ತು ಉಪವಾಸ, ಪ್ರಾರ್ಥನೆಗಳನ್ನು ಸಲ್ಲಿಸುವುದು, ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
ಮಾನವೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅತ್ಯಂತ ಉತ್ಸಾಹದಿಂದ ಆಚರಿಸುವುದು ಹಬ್ಬದ ಹಿನ್ನಲೆಯಾಗಿದೆ.
ಎಸ್.ಜಿ.ಟಿ & ಗ್ರೀನ್ ಎಂಬಸಿ ಸಂಸ್ಥೆ ವತಿಯಿಂದ ಆಹಾರದ ಪಾಕೆಟ್ ವಿತರಣೆ.

ಇನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಗರದ ಉದ್ಯಮಿಯಾಗಿರುವ ಸಯ್ಯದ್ ಇಕ್ಬಾಲ್ ಸಾಬ್ ಕುಟುಂಬಸ್ಥರು ತಮ್ಮ ಮಾಲೀಕತ್ವದ ಸಂಸ್ಥೆ ವತಿಯಿಂದ ಬಡವರಿಗೆ ಆಹಾರವನ್ನು ವಿತರಣೆ ಮಾಡುವ ಮೂಲಕ ಮಾನವೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕಂಡುಬಂತು.
ಒಟ್ಟರೆ ಸಾಗರ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಇಂದು ಈದ್ ಫಿತರ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.



