ಮಂಗಳೂರು: ಮಣ್ಣು ಕುಸಿದು ಬಿದ್ದು ಜೆಸಿಬಿ ಚಾಲಕ ಸಾವು.
ಅಗೆತದ ವೇಳೆ ಮಣ್ಣು ಕುಸಿದು ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ನಡೆದಿದೆ.

ಮೃತ ಜೆಸಿಬಿ ಚಾಲಕನನ್ನು ಝಾರ್ಖಂಡ್ ಕೊಸಾರ್ ಅನ್ಸಾರಿ (22) ಎಂದು ಗುರುತಿಸಲಾಗಿದೆ.
ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಜೆಸಿಬಿಯ ಚಾಲಕ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಭೇಟಿ ನೀಡಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.



