ಮೈಸೂರು : ಸರ್ವಜನರ ಹಿತ ಕಾಯುವ ಪಕ್ಷ ಕಾಂಗ್ರೆಸ್ – ಆರ್ ಧೃವನಾರಯಣ್
ಕೆ.ಆರ್ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶದ ಪೂರ್ವಭಾವಿ ಸಭೆ.
ಮೈಸೂರು ನಗರದಲ್ಲಿ 26ನೇ ತಾರೀಖು ಜೆಕೆ ಮೈದಾನದಲ್ಲಿ ಜರುಗಲಿರುವ ಐತಿಹಾಸಿಕ ಪ್ರಜಾಧ್ವನಿ ಯಾತ್ರೆಯ ಸಮಾವೇಶದ ಹಿನ್ನೆಲೆ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಜರುಗಿತು.ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧೃವನಾರಯಣ್ ರವರು ಜ್ಯೋತಿ ಬೆಳಗುವ ಮೂಲಕ ಉಧ್ಘಾಟಿಸಿದರು.ನಗರಾಧ್ಯಕ್ಷರಾದ ಆರ್ ಮೂರ್ತಿ,ಕೆಪಿಸಿಸಿ ವಕ್ತಾರರುಗಳಾದ ಲಕ್ಷ್ಣಣ್,ಹೆಚ್ ಎ ವೆಂಕಟೇಶ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ವಿದ್ಯಾ,ಭವ್ಯ,ಪಾಲಿಕೆ ಸದಸ್ಯರುಗಳಾದ ಲೋಕೇಶ್ ಪಿಯಾ,ಜೆ ಗೋಪಿ,ಶೋಭಾ ಸುನೀಲ್,ಮಾಜಿ ಮಹಾಪೌರರಾದ ಟಿ ಬಿ ಚಿಕ್ಕಣ್ಣ,ಮೋದಾಮಣಿ,ಟಿ.ಎಸ್ ರವಿಶಂಕರ್ ,ವರುಣಾ ಮಹೇಶ್,ಶ್ರೀನಾಥ್ ಬಾಬು,ಭಾಸ್ಕರ್ ಎಲ್ ಗೌಡ,ಈಶ್ವರ್ ಚಕ್ಕಡಿ,ಮಾರ್ಬಳ್ಳಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಆರ್ ಧೃವನಾರಯಣ್ ರವರು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅದು ಮಲ್ಲಿಕಾರ್ಜುನ ಖರ್ಗೆರವರಿಗೆ,ಡಿಕೆ ಶಿವಕುಮಾರ್ ರವರಿಗೆ,ಸಿದ್ದರಾಮಯ್ಯನವರಿಗೆ ಸಿಗುವ ಗೌರವ ಆಗುತ್ತದೆ.ಕಳೆದ ಭಾರಿ ಅಷ್ಟೆಲ್ಲಾ ಭರವಸೆಗಳನ್ನು ಈಡೇರಿಸಿದರೂ ಸಹ,ಸಿದ್ದರಾಮಯ್ಯನವರು ಯಾವುದೇ ಹಗರಣ,ಭ್ರಷ್ಟಚಾರ ಮಾಡದೇ ಇದ್ದರೂ ಪಕ್ಷಕ್ಕೆ ಸೋಲಾಯಿತು.ಅದು ನಮ್ಮ ಸರ್ಕಾರದ ಅವಧಿಯ ಯೋಜನೆಗಳ ಪ್ರಚಾರವಿಲ್ಲದ ಕಾರಣ.ಕೋವಿಡ್ ನಂತಹ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವಿಲ್ಲದಿದ್ದರೂ ಪ್ರಾಮಾಣಿಕವಾಗಿ ಡಿಕೆ ಶಿವಕುಮಾರ್,ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಸೇವೆಗಳನ್ನ ಮಾಡಿದ್ದಾರೆ.ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟುಕೊಂಡು ಹೋದರೆ ಸಾಕು ನಾವು ಸ್ಪಷ್ಟ ಬಹುಮತ ಗಳಿಸುವುದು ನಿಶ್ಚಿತ.ಈಗಾಗಲೇ ಯಾವುದೇ ಸರ್ವೆಗಳ ವರದಿಯಲ್ಲೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸುವ ಸೂಚನೆಯನ್ನು ಭಿತ್ತರಿಸಿವೆ.ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟಚಾರ ,ಜನವಿರೋಧಿ ಆಡಳಿತ ಮತ್ತು ಹಗರಣಗಳಿಂದಲೇ ಮುಳುಗಿ ಹೋಗಿದೆ.ಹಾಗಾಗೀ ಮೋದಿಯವರು,ಅಮಿತ್ ಶಾ ರವರು ಪದೇ ಪದೇ ಕರ್ನಾಟಕ ಬರುತ್ತಿದ್ದಾರೆ.ಇನ್ನೂ ಸೋಮಶೇಖರ್ ರವರು ಸಹ ಸೋತ ದಿನದಿಂದಲೂ ಕುಗ್ಗದೆ ಇಡೀ ರಾಜ್ಯದಲ್ಲೇ ಮಾದರಿಯಾಗಿ ಪ್ರತಿನಿತ್ಯವೂ ವಾರ್ಡ್ ಭೇಟಿಗಳನ್ನು ಮಾಡಿಕೊಂಡು,ಜನರ ನಿರಂತರ ಸಂಪರ್ಕದಲ್ಲಿದ್ದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.ಸಿದ್ದರಾಮಯ್ಯನವರ ಅವಧಿಯಲ್ಲೂ ಒಳ್ಳೆಯ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.ಹಾಗಾಗೀ ಸೋಮಶೇಖರ್ ರವರ ಜೊತೆ ಎಲ್ಲರೂ ಕೈಜೋಡಿಸಿ ಒಗ್ಗಟ್ಟಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದೆ ಆದರೆ ಮತ್ತೆ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಇಡಿಯಲು ಸಾಧ್ಯವಾಗುತ್ತದೆ ಎಂದರು.ದಯಾಮಾಡಿ 26ನೇ ತಾರೀಖು ಮೈಸೂರಿನಲ್ಲಿ ಜರುಗುವ ಪ್ರಜಾಧ್ವನಿ ಸಮಾವೇಶದಲ್ಲಿ ಕೆ ಆರ್ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಪ್ರಜಾಧ್ವನಿ ಕಾರ್ಯಕ್ರಮ ಪ್ರಾರಂಭವಾದ ದಿನದಿಂದ ಬಿಜೆಪಿ ಯವರು ನಿದ್ರೆ ಬಿಟ್ಟಿದ್ದಾರೆ.ಮಾಧುಸ್ವಾಮಿ ರವರಂತು ಮಾನಸಿಕ ಅಸ್ವಸ್ಥರಾಗಿ ಬಿಟ್ಟಿದ್ದಾರೆ.2023 ರ ಚುನಾವಣೆ ನಮ್ಮೆಲ್ಲರ ಅಸ್ತಿತ್ವದ ಪ್ರಶ್ನೆ.ಹಾಗಾಗೀ ಅದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು.ಸಿದ್ದರಾಮಯ್ಯನವರು 3800 ಕೋಟಿ ಹಣ ಮೈಸೂರಿನ ಅಭಿವೃದ್ಧಿಗಾಗಿ ಕೊಟ್ಟರು.ಆದರೂ ನಾವು ಪ್ರಚಾರದ ಕೊರತೆಯಿಂದ ಸೋಲಬೇಕಾಯಿತು.ಬಿಜೆಪಿಯವರದು ಒಡೆದು ಆಳುವ ನೀತಿ.ಇವತ್ತು ಖಾಸಗೀಕರಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ.ಅವರಿಂದ ಜನಹಿತ ಸಿಗುವುದು ಖಂಡಿತಾ ಸುಳ್ಳು ಹಾಗಾಗೀ ನಮ್ಮ ಪಕ್ಷ ಈಗಾಗಲೇ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಕಟಿಸಿದೆ.ಮುಂದಿನ ದಿನಗಳಲ್ಲಿ ಈ ನಾಡಿಗೆ,ಈ ದೇಶಕ್ಕೆ ಒಳಿತಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.ಆ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸಬೇಕು.ನಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನು ಮನೆ ಮನೆ ಬಾಗಿಲಿಗೆ ತೆರಳಿ ತಿಳಿಸಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ವಿವಿಧ ಪಕ್ಷಗಳಿಂದ ಮುಖಂಡರುಗಳಾದ ಪರಶಿವಮೂರ್ತಿ,ರವಿಶಂಕರ್,ರಘುವೀರ್ ರಾಜು,ಗಣೇಶ,ರಾಕೇಶ್,ಸೂರ್ಯ,ಬಾಬು,ಷಡಕ್ಷರಿ,ರಾಮಸ್ವಾಮಿ ಪಿ ,ಉದಯ್ ಕುಮಾರ್ ಹಾಗೂ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮೆಚ್ಚಿ ಎಂ ಕೆ ಸೋಮಶೇಖರ್ ಕಾರ್ಯವೈಖರಿ ಮೆಚ್ಚಿ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

